ಮೂಗು ಮಣ್ಣಾಗಲಿ, ನಂತರ ಮೂಗು ಮಣ್ಣಾಗಲಿ, ನಂತರ ಮೂಗು ಮಣ್ಣಾಗಲಿ." ಅವರೊಡನೆ ಕೇಳಲಾಯಿತು: “ಓ ಅಲ್ಲಾಹನ ಸಂದೇಶವಾಹಕರೇ! ಯಾರು?" ಅವರು…

ಮೂಗು ಮಣ್ಣಾಗಲಿ, ನಂತರ ಮೂಗು ಮಣ್ಣಾಗಲಿ, ನಂತರ ಮೂಗು ಮಣ್ಣಾಗಲಿ." ಅವರೊಡನೆ ಕೇಳಲಾಯಿತು: “ಓ ಅಲ್ಲಾಹನ ಸಂದೇಶವಾಹಕರೇ! ಯಾರು?" ಅವರು ಉತ್ತರಿಸಿದರು: "ಯಾರು ಬದುಕಿರುವಾಗ ಅವನ ತಂದೆ-ತಾಯಿಗಳಲ್ಲಿ ಒಬ್ಬರು ಅಥವಾ ಇಬ್ಬರು ವೃದ್ಧಾಪ್ಯವನ್ನು ತಲುಪಿಯೂ ಸ್ವರ್ಗವನ್ನು ಪ್ರವೇಶಿಸಲಾಗದವನು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮೂಗು ಮಣ್ಣಾಗಲಿ, ನಂತರ ಮೂಗು ಮಣ್ಣಾಗಲಿ, ನಂತರ ಮೂಗು ಮಣ್ಣಾಗಲಿ." ಅವರೊಡನೆ ಕೇಳಲಾಯಿತು: “ಓ ಅಲ್ಲಾಹನ ಸಂದೇಶವಾಹಕರೇ! ಯಾರು?" ಅವರು ಉತ್ತರಿಸಿದರು: "ಯಾರು ಬದುಕಿರುವಾಗ ಅವನ ತಂದೆ-ತಾಯಿಗಳಲ್ಲಿ ಒಬ್ಬರು ಅಥವಾ ಇಬ್ಬರು ವೃದ್ಧಾಪ್ಯವನ್ನು ತಲುಪಿಯೂ ಸ್ವರ್ಗವನ್ನು ಪ್ರವೇಶಿಸಲಾಗದವನು."

[صحيح] [رواه مسلم]

الشرح

ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಅವಮಾನ ಮತ್ತು ತಿರಸ್ಕಾರದಿಂದ—ಎಲ್ಲಿಯವರೆಗೆಂದರೆ ಆತ ತನ್ನ ಮೂಗನ್ನು ಮಣ್ಣಿಗೆ ತಾಗಿಸುವಂತಾಗುವ ತನಕ—ಪ್ರಾರ್ಥಿಸಿದರು. ಅವರು ಇದನ್ನು ಮೂರು ಬಾರಿ ಪುನರುಚ್ಛರಿಸಿದರು. ಆಗ ಅವರೊಡನೆ ಕೇಳಲಾಯಿತು: "ಓ ಅಲ್ಲಾಹನ ಸಂದೇಶವಾಹಕರೇ! ನೀವು ಯಾರ ವಿರುದ್ಧವಾಗಿ ಪ್ರಾರ್ಥಿಸಿದಿರೋ ಆ ವ್ಯಕ್ತಿ ಯಾರು?" ಅವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: ಯಾರು ಬದುಕಿರುವಾಗ ಅವನ ತಂದೆ-ತಾಯಿಗಳಲ್ಲಿ ಒಬ್ಬರು ಅಥವಾ ಇಬ್ಬರು ವೃದ್ಧಾಪ್ಯವನ್ನು ತಲುಪಿ, ಅವರ ಕಾರಣದಿಂದ ಸ್ವರ್ಗವನ್ನು ಪ್ರವೇಶಿಸಲಾಗದವನು. ಅಂದರೆ, ಅವರಿಗೆ ಒಳಿತು ಮಾಡದ ಮತ್ತು ಅವರಿಗೆ ಅವಿಧೇಯತೆ ತೋರಿದ ಕಾರಣದಿಂದ ಅವನಿಗೆ ಸ್ವರ್ಗ ಪ್ರವೇಶಿಸಲಾಗಲಿಲ್ಲ.

فوائد الحديث

ಮಾತಾಪಿತರಿಗೆ ಒಳಿತು ಮಾಡುವುದು ಕಡ್ಡಾಯವಾಗಿದೆ. ಅದು ಸ್ವರ್ಗ ಪ್ರವೇಶದ ಕಾರಣಗಳಲ್ಲಿ ಒಂದಾಗಿದೆ. ವಿಶೇಷವಾಗಿ, ಅವರ ವೃದ್ಧಾಪ್ಯದಲ್ಲಿ ಮತ್ತು ಅವರು ದುರ್ಬಲರಾಗಿರುವಾಗ.

ಮಾತಾಪಿತರಿಗೆ ಅವಿಧೇಯತೆ ತೋರುವುದು ಮಹಾಪಾಪಗಳಲ್ಲಿ ಒಂದಾಗಿದೆ.

التصنيفات

Merits of Being Dutiful to One's Parents