ಇವೆರಡನ್ನು ನನ್ನ ಸಮುದಾಯದ ಪುರುಷರಿಗೆ ನಿಷೇಧಿಸಲಾಗಿದೆ ಮತ್ತು ಮಹಿಳೆಯರಿಗೆ ಅನುಮತಿಸಲಾಗಿದೆ

ಇವೆರಡನ್ನು ನನ್ನ ಸಮುದಾಯದ ಪುರುಷರಿಗೆ ನಿಷೇಧಿಸಲಾಗಿದೆ ಮತ್ತು ಮಹಿಳೆಯರಿಗೆ ಅನುಮತಿಸಲಾಗಿದೆ

ಅಲಿ ಬಿನ್ ಅಬೂತಾಲಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಎಡಗೈಯಲ್ಲಿ ರೇಷ್ಮೆಯನ್ನು ಮತ್ತು ಬಲಗೈಯಲ್ಲಿ ಬಂಗಾರವನ್ನು ಎತ್ತಿ ಹಿಡಿಯುತ್ತಾ ಹೇಳಿದರು: "ಇವೆರಡನ್ನು ನನ್ನ ಸಮುದಾಯದ ಪುರುಷರಿಗೆ ನಿಷೇಧಿಸಲಾಗಿದೆ ಮತ್ತು ಮಹಿಳೆಯರಿಗೆ ಅನುಮತಿಸಲಾಗಿದೆ."

[صحيح]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಎಡಗೈಯಲ್ಲಿ ರೇಷ್ಮೆ ವಸ್ತ್ರವನ್ನು ಅಥವಾ ಅದರ ಒಂದು ತುಂಡನ್ನು ಮತ್ತು ತಮ್ಮ ಬಲಗೈಯಲ್ಲಿ ಬಂಗಾರದ ಒಡವೆ ಅಥವಾ ಬಂಗಾರದ ಬೇರೆ ವಸ್ತುವನ್ನು ಹಿಡಿದು ಹೇಳಿದರು: "ರೇಷ್ಮೆ ಮತ್ತು ಬಂಗಾರವನ್ನು ಧರಿಸುವುದನ್ನು ಪುರುಷರಿಗೆ ನಿಷೇಧಿಸಲಾಗಿದೆ ಮತ್ತು ಮಹಿಳೆಯರಿಗೆ ಅನುಮತಿಸಲಾಗಿದೆ."

فوائد الحديث

ಸನದಿ ಹೇಳಿದರು: "ನಿಷೇಧಿಸಲಾಗಿದೆ ಎಂದರೆ ಅವುಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಆದರೆ ಅವುಗಳನ್ನು ಖರೀದಿ ಮತ್ತು ಮಾರಾಟಕ್ಕಾಗಿ ಹಣದ ರೂಪದಲ್ಲಿ ಬಳಸಲು ಎಲ್ಲರಿಗೂ ಅನುಮತಿಯಿದೆ. ಪಾತ್ರೆ ತಯಾರಿಸಲು ಬಂಗಾರವನ್ನು ಬಳಸುವುದು ಅಥವಾ ಬಂಗಾರದ ಪಾತ್ರೆಗಳನ್ನು ಉಪಯೋಗಿಸುವುದು ಎಲ್ಲರಿಗೂ ನಿಷಿದ್ಧವಾಗಿದೆ."

ಮಹಿಳೆಯರಿಗೆ ಅಲಂಕಾರಗಳ ಆವಶ್ಯಕತೆಯಿರುವುದರಿಂದ ಇಸ್ಲಾಮೀ ಧರ್ಮಶಾಸ್ತ್ರವು ಈ ವಿಷಯದಲ್ಲಿ ಅವರಿಗೆ ರಿಯಾಯಿತಿ ನೀಡಿದೆ.

التصنيفات

Clothing and Adornment