ಕೋಪಗೊಳ್ಳಬೇಡಿ

ಕೋಪಗೊಳ್ಳಬೇಡಿ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಒಬ್ಬ ವ್ಯಕ್ತಿ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನನಗೆ ಹಿತವಚನ ನೀಡಿರಿ." ಅವರು ಹೇಳಿದರು: "ಕೋಪಗೊಳ್ಳಬೇಡಿ." ಆ ವ್ಯಕ್ತಿ ಹಲವು ಬಾರಿ ಅದೇ ಪ್ರಶ್ನೆ ಕೇಳಿದಾಗಲೂ ಪ್ರವಾದಿಯವರು ಹೇಳಿದರು: "ಕೋಪಗೊಳ್ಳಬೇಡಿ."

[صحيح] [رواه البخاري]

الشرح

ಸಹಾಬಿಗಳಲ್ಲಿ (ಅಲ್ಲಾಹು ಅವರೆಲ್ಲರ ಬಗ್ಗೆ ಸಂಪ್ರೀತನಾಗಲಿ) ಒಬ್ಬರು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಉಪಕಾರವಾಗುವ ಏನಾದರೊಂದು ವಿಷಯವನ್ನು ತಿಳಿಸಬೇಕೆಂದು ವಿನಂತಿಸಿದಾಗ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರೊಡನೆ "ಕೋಪಗೊಳ್ಳಬೇಡಿ" ಎಂದು ಹೇಳಿದರು. ಇದರ ಅರ್ಥ: ಕೋಪಕ್ಕೆ ಕಾರಣವಾಗುವ ಎಲ್ಲಾ ವಿಷಯಗಳಿಂದಲೂ ದೂರವಿರುವುದು, ಕೋಪ ಬಂದರೆ ಮನಸ್ಸನ್ನು ನಿಯಂತ್ರಿಸುವುದು, ಮತ್ತು ಕೋಪದಿಂದ ಕೊಲ್ಲುವುದು, ಥಳಿಸುವುದು, ನಿಂದಿಸುವುದು ಮುಂತಾದವುಗಳಿಗೆ ಮುಂದಾಗದಿರುವುದು. ಆ ವ್ಯಕ್ತಿ ಪುನಃ ಪುನಃ ಹಿತವಚನ ನೀಡಬೇಕೆಂದು ಹೇಳಿದಾಗಲೂ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) "ಕೋಪಗೊಳ್ಳಬೇಡಿ." ಎಂದು ಹೇಳುವುದರ ಹೊರತು ಬೇರೇನೂ ಹೇಳಲಿಲ್ಲ.

فوائد الحديث

ಈ ಹದೀಸಿನಲ್ಲಿ ಕೋಪ ಮತ್ತು ಅದರ ಕಾರಣಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಏಕೆಂದರೆ ಅದು ಎಲ್ಲಾ ಕೆಡುಕುಗಳನ್ನೂ ಒಳಗೊಂಡಿದೆ. ಅದರಿಂದ ದೂರವಿರುವುದು ಎಲ್ಲಾ ರೀತಿಯ ಒಳಿತುಗಳಿಗೆ ಕಾರಣವಾಗುತ್ತದೆ.

ಅಲ್ಲಾಹು ನಿಷೇಧಿಸಿದ ಕಾರ್ಯಗಳನ್ನು ಯಾರಾದರೂ ಮಾಡುವಾಗ ಕೋಪಗೊಳ್ಳುವುದು ಪ್ರಶಂಸನೀಯವಾಗಿದೆ.

ಕೇಳುಗನು ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಮತ್ತು ಅದರ ಮಹತ್ವವನ್ನು ತಿಳಿದುಕೊಳ್ಳಲು ಅಗತ್ಯ ಸಂದರ್ಭಗಳಲ್ಲಿ ಅದನ್ನು ಪುನರಾವರ್ತಿಸಬೇಕೆಂದು ಈ ಹದೀಸ್ ತಿಳಿಸುತ್ತದೆ.

ವಿದ್ವಾಂಸರಿಂದ ಹಿತವಚನ ಪಡೆಯುವುದರ ಶ್ರೇಷ್ಠತೆಯನ್ನು ಈ ಹದೀಸ್ ತಿಳಿಸುತ್ತದೆ.

التصنيفات

Praiseworthy Morals