ಮನುಷ್ಯನು ಒಬ್ಬ ವ್ಯಕ್ತಿಯ ಸಮಾಧಿಯ ಮೂಲಕ ಹಾದುಹೋಗುವಾಗ, 'ನಾನು ಅವನ ಸ್ಥಾನದಲ್ಲಿದ್ದರೆ ಎಷ್ಟು ಚೆನ್ನಾಗಿತ್ತು!' ಎಂದು ಹೇಳುವವರೆಗೆ…

ಮನುಷ್ಯನು ಒಬ್ಬ ವ್ಯಕ್ತಿಯ ಸಮಾಧಿಯ ಮೂಲಕ ಹಾದುಹೋಗುವಾಗ, 'ನಾನು ಅವನ ಸ್ಥಾನದಲ್ಲಿದ್ದರೆ ಎಷ್ಟು ಚೆನ್ನಾಗಿತ್ತು!' ಎಂದು ಹೇಳುವವರೆಗೆ ಅಂತ್ಯಸಮಯವು ಸಂಭವಿಸುವುದಿಲ್ಲ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮನುಷ್ಯನು ಒಬ್ಬ ವ್ಯಕ್ತಿಯ ಸಮಾಧಿಯ ಮೂಲಕ ಹಾದುಹೋಗುವಾಗ, 'ನಾನು ಅವನ ಸ್ಥಾನದಲ್ಲಿದ್ದರೆ ಎಷ್ಟು ಚೆನ್ನಾಗಿತ್ತು!' ಎಂದು ಹೇಳುವವರೆಗೆ ಅಂತ್ಯಸಮಯವು ಸಂಭವಿಸುವುದಿಲ್ಲ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಒಬ್ಬ ಮನುಷ್ಯನು ಒಂದು ಸಮಾಧಿಯ ಮೂಲಕ ಹಾದುಹೋಗುವಾಗ, ತಾನು ಸತ್ತು ಅವನ ಸ್ಥಳದಲ್ಲಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಹಾರೈಸುವ ತನಕ ಅಂತ್ಯಸಮಯವು (ಪುನರುತ್ಥಾನ ದಿನ) ಸಂಭವಿಸುವುದಿಲ್ಲ. ಸುಳ್ಳು ಮತ್ತು ಅದರ ವಕ್ತಾರರು ವ್ಯಾಪಕವಾಗಿರುವುದನ್ನು ಮತ್ತು ಪರೀಕ್ಷೆಗಳು, ಪಾಪಗಳು ಹಾಗೂ ಕೆಡುಕುಗಳು ಬಹಿರಂಗವಾಗಿ ಜರುಗುತ್ತಿರುವುದನ್ನು ಕಂಡು ತನ್ನ ಧರ್ಮವು ಎಲ್ಲಿ ನಾಶವಾಗಬಹುದೋ ಎಂದು ತನ್ನ ಬಗ್ಗೆಯಿರುವ ಭಯವೇ ಅವನು ಹೀಗೆ ಹಾರೈಸಲು ಕಾರಣ.

فوائد الحديث

ಅಂತ್ಯ ಸಮಯದಲ್ಲಿ ಪಾಪಗಳು ಮತ್ತು ಪರೀಕ್ಷೆಗಳು ಪ್ರತ್ಯಕ್ಷವಾಗುತ್ತದೆಯೆಂದು ಸೂಚಿಸಲಾಗಿದೆ.

ಜಾಗರೂಕರಾಗಿರಲು, ವಿಶ್ವಾಸ ಹಾಗೂ ಸತ್ಕರ್ಮಗಳೊಂದಿಗೆ ಮರಣಕ್ಕೆ ಸಿದ್ಧತೆ ನಡೆಸಲು ಮತ್ತು ಪರೀಕ್ಷೆಗಳು ಹಾಗೂ ಕ್ಲೇಶಗಳು ಜರುಗುವ ಸ್ಥಳಗಳಿಂದ ದೂರವಿರಲು ಪ್ರೋತ್ಸಾಹಿಸಲಾಗಿದೆ.

التصنيفات

The Barzakh Life (After death Period), States of the Righteous Believers, Purification of Souls