“ಯಾರ ನಾಲಗೆ ಮತ್ತು ಕೈಯಿಂದ ಇತರ ಮುಸಲ್ಮಾನರು ಸುರಕ್ಷಿತರೋ ಅವನೇ ಮುಸ್ಲಿಮ್. ಯಾರು ಅಲ್ಲಾಹು ನಿಷೇಧಿಸಿದ್ದನ್ನು ತೊರೆಯುತ್ತಾನೋ…

“ಯಾರ ನಾಲಗೆ ಮತ್ತು ಕೈಯಿಂದ ಇತರ ಮುಸಲ್ಮಾನರು ಸುರಕ್ಷಿತರೋ ಅವನೇ ಮುಸ್ಲಿಮ್. ಯಾರು ಅಲ್ಲಾಹು ನಿಷೇಧಿಸಿದ್ದನ್ನು ತೊರೆಯುತ್ತಾನೋ ಅವನೇ ಮುಹಾಜಿರ್

ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಯಾರ ನಾಲಗೆ ಮತ್ತು ಕೈಯಿಂದ ಇತರ ಮುಸಲ್ಮಾನರು ಸುರಕ್ಷಿತರೋ ಅವನೇ ಮುಸ್ಲಿಮ್. ಯಾರು ಅಲ್ಲಾಹು ನಿಷೇಧಿಸಿದ್ದನ್ನು ತೊರೆಯುತ್ತಾನೋ ಅವನೇ ಮುಹಾಜಿರ್."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರ ನಾಲಗೆಯಿಂದ ಇತರ ಮುಸಲ್ಮಾನರು ಸುರಕ್ಷಿತರೋ, ಅವನೇ ಇಸ್ಲಾಮನ್ನು ಪೂರ್ಣವಾಗಿ ಅಳವಡಿಸಿಕೊಂಡ ಮುಸ್ಲಿಂ. ಅಂದರೆ ಅವನು ಯಾರನ್ನೂ ನಿಂದಿಸುವುದಿಲ್ಲ, ಶಪಿಸುವುದಿಲ್ಲ, ದೂಷಿಸುವುದಿಲ್ಲ, ಅಥವಾ ನಾಲಗೆಯ ಮೂಲಕ ಅವರಿಗೆ ಯಾವುದೇ ರೀತಿಯ ತೊಂದರೆ ಕೊಡುವುದಿಲ್ಲ. ಹಾಗೆಯೇ ಅವರು ಅವನ ಕೈಯಿಂದಲೂ ಸುರಕ್ಷಿತರಾಗಿರುತ್ತಾರೆ. ಅಂದರೆ ಅವನು ಇತರರ ಮೇಲೆ ಅತಿರೇಕವೆಸಗುವುದು, ಇತರರ ಸಂಪತ್ತನ್ನು ಅನ್ಯಾಯವಾಗಿ ತಿನ್ನುವುದು ಮುಂತಾದ ಯಾವುದನ್ನೂ ಮಾಡುವುದಿಲ್ಲ. ಮುಹಾಜಿರ್ (ಅಲ್ಲಾಹನ ಮಾರ್ಗದಲ್ಲಿ ವಲಸೆ ಹೋದವನು) ಯಾರೆಂದರೆ ಅಲ್ಲಾಹು ನಿಷೇಧಿಸಿದ್ದನ್ನು ತೊರೆದವನು.

فوائد الحديث

ಭೌತಿಕವಾಗಿ ಅಥವಾ ನೈತಿಕವಾಗಿ ಇತರರಿಗೆ ಹಾನಿ ಮಾಡದಿರುವ ಮೂಲಕ ಮಾತ್ರ ಇಸ್ಲಾಮಿನ ಪರಿಪೂರ್ಣತೆಯನ್ನು ಸಾಧಿಸಬಹುದು.

ನಾಲಗೆ ಮತ್ತು ಕೈಯನ್ನು ಪ್ರತ್ಯೇಕವಾಗಿ ಪ್ರಸ್ತಾಪಿಸಲಾಗಿದೆ. ಏಕೆಂದರೆ, ತಪ್ಪುಗಳು ಮತ್ತು ತೊಂದರೆಗಳು ಹೆಚ್ಚಾಗಿ ಸಂಭವಿಸುವುದು ಅವುಗಳಿಂದಲೇ ಆಗಿದೆ. ಹೆಚ್ಚಿನ ಹಾನಿಗಳು ಸಂಭವಿಸುವುದು ಅವೆರಡರಿಂದಲೇ ಆಗಿದೆ.

ಪಾಪವನ್ನು ತ್ಯಜಿಸುವಂತೆ ಮತ್ತು ಅಲ್ಲಾಹು ಆಜ್ಞಾಪಿಸಿದ್ದನ್ನು ಪಾಲಿಸುವಂತೆ ಪ್ರೇರೇಪಿಸಲಾಗಿದೆ.

ಅಲ್ಲಾಹನ ಹಕ್ಕುಗಳನ್ನು ಮತ್ತು ಮುಸ್ಲಿಮರ ಹಕ್ಕುಗಳನ್ನು ನೆರವೇರಿಸುವವರೇ ಅತಿಶ್ರೇಷ್ಠ ಮುಸ್ಲಿಮರು.

ಆಕ್ರಮಣವು ಮೌಖಿಕವಾಗಿ ಅಥವಾ ದೈಹಿಕವಾಗಿ ಸಂಭವಿಸಬಹುದು.

ಅಲ್ಲಾಹು ನಿಷೇಧಿಸಿದ್ದನ್ನು ತೊರೆಯುವುದೇ ಪೂರ್ಣರೂಪದ ವಲಸೆಯಾಗಿದೆ.

التصنيفات

Increase and Decrease of Faith, Praiseworthy Morals, Manners of Speaking and Keeping Silent