ನಮ್ಮ ವಿರುದ್ಧ ಆಯುಧ ಎತ್ತಿದವನು ನಮ್ಮಲ್ಲಿ ಸೇರಿದವನಲ್ಲ

ನಮ್ಮ ವಿರುದ್ಧ ಆಯುಧ ಎತ್ತಿದವನು ನಮ್ಮಲ್ಲಿ ಸೇರಿದವನಲ್ಲ

ಅಬೂ ಮೂಸಾ ಅಶ್‌ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಮ್ಮ ವಿರುದ್ಧ ಆಯುಧ ಎತ್ತಿದವನು ನಮ್ಮಲ್ಲಿ ಸೇರಿದವನಲ್ಲ."

[صحيح] [متفق عليه]

الشرح

ಇಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಚ್ಚರಿಸುವುದೇನೆಂದರೆ, ಮುಸಲ್ಮಾನರನ್ನು ಹೆದರಿಸಲು, ಅಥವಾ ದೋಚಲು, ಅವರ ವಿರುದ್ಧ ಆಯುಧ ಎತ್ತುವವರು, ಯಾರು ಅನ್ಯಾಯವಾಗಿ ಇಂತಹ ಕೃತ್ಯಗಳನ್ನು ಮಾಡುತ್ತಾರೋ ಅವರು ಮಹಾ ಅಪರಾಧವನ್ನು ಮತ್ತು ಮಹಾ ಪಾಪವನ್ನು ಮಾಡುತ್ತಿದ್ದಾರೆ. ಅವರು ಈ ಉಗ್ರ ಎಚ್ಚರಿಕೆಗೆ ಅರ್ಹರಾಗುತ್ತಾರೆ.

فوائد الحديث

ಒಬ್ಬ ಮುಸಲ್ಮಾನ ತನ್ನ ಮುಸಲ್ಮಾನ ಸಹೋದರರ ವಿರುದ್ಧ ಹೋರಾಡುವುದನ್ನು ಉಗ್ರವಾಗಿ ಎಚ್ಚರಿಸಲಾಗಿದೆ.

ಮುಸಲ್ಮಾನರ ವಿರುದ್ಧ ಶಸ್ತ್ರಗಳನ್ನು ಝಳಪಿಸುವುದು ಮತ್ತು ಕೊಲೆಗೈಯುವ ಮೂಲಕ ಭೂಮಿಯಲ್ಲಿ ಅರಾಜಕತೆಯನ್ನು ಹರಡುವುದು ಅತಿದೊಡ್ಡ ದುಷ್ಕೃತ್ಯ ಮತ್ತು ಕಿಡಿಗೇಡಿತನವಾಗಿದೆ.

ದಂಗೆಕೋರರು, ಕಿಡಿಗೇಡಿಗಳು ಮುಂತಾದವರ ವಿರುದ್ಧ ನ್ಯಾಯವಾದ ರೀತಿಯಲ್ಲಿ ಹೋರಾಡುವುದು ಈ ಎಚ್ಚರಿಕೆಯಲ್ಲಿ ಒಳಪಡುವುದಿಲ್ಲ.

ಶಸ್ತ್ರ ಮುಂತಾದವುಗಳ ಮೂಲಕ ಮುಸಲ್ಮಾನರನ್ನು ಬೆದರಿಸುವುದು ನಿಷಿದ್ಧವಾಗಿದೆ. ಅದು ತಮಾಷೆಗಾದರೂ ಸರಿಯೇ.

التصنيفات

Immorality, Prescribed Punishment for Highway Robbery