ನೀವು ಅಝಾನ್ ಕೇಳಿದರೆ ಮುಅಝ್ಝಿನ್ ಹೇಳುವಂತೆಯೇ ಹೇಳಿರಿ

ನೀವು ಅಝಾನ್ ಕೇಳಿದರೆ ಮುಅಝ್ಝಿನ್ ಹೇಳುವಂತೆಯೇ ಹೇಳಿರಿ

ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಅಝಾನ್ ಕೇಳಿದರೆ ಮುಅಝ್ಝಿನ್ ಹೇಳುವಂತೆಯೇ ಹೇಳಿರಿ."

[صحيح] [متفق عليه]

الشرح

ಮುಅಝ್ಝಿನ್ ಅಝಾನ್ ನೀಡುವುದನ್ನು ಕೇಳುವಾಗ ಅದಕ್ಕೆ ಉತ್ತರ ನೀಡಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮನ್ನು ಪ್ರೋತ್ಸಾಹಿಸುತ್ತಿದ್ದಾರೆ. ಅದು ಹೇಗೆಂದರೆ, ನಾವು ಅಕ್ಷರಶಃ ಮುಅಝ್ಝಿನ್ ಹೇಳುವಂತೆಯೇ ಹೇಳುವುದು. ಮುಅಝ್ಝಿನ್ ಅಲ್ಲಾಹು ಅಕ್ಬರ್ ಎಂದು ಹೇಳುವಾಗ, ನಾವು ಕೂಡ ಅಲ್ಲಾಹು ಅಕ್ಬರ್ ಎಂದು ಹೇಳುವುದು. ಮುಅಝ್ಝಿನ್ ಎರಡು ಸಾಕ್ಷ್ಯವಚನಗಳನ್ನು ಹೇಳುವಾಗ, ನಾವು ಕೂಡ ನಂತರ ಅವುಗಳನ್ನು ಪುನರುಚ್ಛರಿಸುವುದು. ಆದರೆ ಮುಅಝ್ಝಿನ್ "ಹಯ್ಯ ಅಲಸ್ಸಲಾಹ್" ಮತ್ತು "ಹಯ್ಯ ಅಲಲ್ ಫಲಾಹ್" ಎಂದು ಹೇಳುವಾಗ, ಅದರ ನಂತರ "ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್" ಎಂದು ಹೇಳಬೇಕಾಗಿದೆ.

فوائد الحديث

ಹದೀಸಿನ ಸಾರ್ವತ್ರಿಕ ಅರ್ಥದ ಪ್ರಕಾರ, ಅನೇಕ ಮುಅಝ್ಝಿನ್‌ಗಳಿದ್ದರೆ ಮೊದಲ ಮುಅಝ್ಝಿನ್ ಹೇಳಿ ಮುಗಿಸಿದ ಬಳಿಕವೇ ಎರಡನೇ ಮುಅಝ್ಝಿನ್ ಹೇಳಬೇಕಾಗಿದೆ.

ಶೌಚಾಲಯದಲ್ಲಿ ಅಥವಾ ಅತ್ಯಾವಶ್ಯಕ ಕೆಲಸದಲ್ಲಿರುವಾಗ ಹೊರತುಪಡಿಸಿ ಇತರ ಎಲ್ಲಾ ಸಂದರ್ಭಗಳಲ್ಲೂ ಮುಅಝ್ಝಿನ್‌ಗೆ ಉತ್ತರ ನೀಡಬೇಕಾಗಿದೆ.

التصنيفات

The Azan and Iqaamah