ನಿಮ್ಮ ಮನೆಗಳನ್ನು ಸಮಾಧಿಗಳನ್ನಾಗಿ ಮಾಡಬೇಡಿ. ನಿಶ್ಚಯವಾಗಿಯೂ ಸೂರ ‌ಬಕರ ಪಠಿಸಲಾಗುವ ಮನೆಯಿಂದ ಶೈತಾನನು ಓಡಿ ಹೋಗುತ್ತಾನೆ

ನಿಮ್ಮ ಮನೆಗಳನ್ನು ಸಮಾಧಿಗಳನ್ನಾಗಿ ಮಾಡಬೇಡಿ. ನಿಶ್ಚಯವಾಗಿಯೂ ಸೂರ ‌ಬಕರ ಪಠಿಸಲಾಗುವ ಮನೆಯಿಂದ ಶೈತಾನನು ಓಡಿ ಹೋಗುತ್ತಾನೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮ ಮನೆಗಳನ್ನು ಸಮಾಧಿಗಳನ್ನಾಗಿ ಮಾಡಬೇಡಿ. ನಿಶ್ಚಯವಾಗಿಯೂ ಸೂರ ‌ಬಕರ ಪಠಿಸಲಾಗುವ ಮನೆಯಿಂದ ಶೈತಾನನು ಓಡಿ ಹೋಗುತ್ತಾನೆ."

[صحيح] [رواه مسلم]

الشرح

ಮನೆಗಳಲ್ಲಿ ನಮಾಝ್ ಮಾಡದಿರುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಹದೀಸಿನಲ್ಲಿ ವಿರೋಧಿಸುತ್ತಾರೆ. ಏಕೆಂದರೆ ಇದರಿಂದ ಮನೆಗಳು ಸಮಾಧಿಸ್ಥಳವಾಗಿ ಮಾರ್ಪಡುತ್ತದೆ. ಸಮಾಧಿಸ್ಥಳವು ನಮಾಝ್ ಮಾಡುವ ಸ್ಥಳವಲ್ಲ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸೂರ ‌ಬಕರ ಪಠಿಸಲಾಗುವ ಮನೆಯಿಂದ ಶೈತಾನನು ಓಡಿ ಹೋಗುತ್ತಾನೆ ಎಂದು ತಿಳಿಸುತ್ತಾರೆ.

فوائد الحديث

ಮನೆಗಳಲ್ಲಿ ಆರಾಧನೆಗಳನ್ನು ಮತ್ತು ಐಚ್ಛಿಕ ನಮಾಝ್‌ಗಳನ್ನು ಹೆಚ್ಚಿಸಲು ಈ ಹದೀಸಿನಲ್ಲಿ ಪ್ರೋತ್ಸಾಹವಿದೆ.

ಸಮಾಧಿಸ್ಥಳದಲ್ಲಿ ನಮಾಝ್ ಮಾಡಬಾರದು. ಏಕೆಂದರೆ ಅದು ಶಿರ್ಕ್ (ಬಹುದೇವಾರಾಧನೆ)ಗೆ ಮತ್ತು ಸಮಾಧಿಗಳಲ್ಲಿರುವ ವ್ಯಕ್ತಿಗಳ ವಿಷಯದಲ್ಲಿ ಹದ್ದು ಮೀರುವುದಕ್ಕೆ ಕಾರಣವಾಗುತ್ತದೆ. ಆದರೆ ಅಂತ್ಯಕ್ರಿಯೆಯ (ಜನಾಝ) ನಮಾಝನ್ನು ಇದರಿಂದ ಹೊರತುಪಡಿಸಲಾಗಿದೆ.

ಸಮಾಧಿಗಳ ಬಳಿ ನಮಾಝ್ ಮಾಡಬಾರದೆಂಬ ವಿರೋಧವು ಸಹಾಬಿಗಳ ನಡುವೆ ಅಂಗೀಕೃತವಾಗಿತ್ತೆಂದು ಈ ಹದೀಸಿನಿಂದ ತಿಳಿಯುತ್ತದೆ. ಈ ಕಾರಣದಿಂದಲೇ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮನೆಯಲ್ಲಿ ನಮಾಝ್ ನಿರ್ವಹಿಸದಿದ್ದರೆ ಅದು ಸಮಾಧಿ ಸ್ಥಳವಾಗುತ್ತದೆಯೆಂದು ಹೇಳಿದರು. ಏಕೆಂದರೆ ಸಮಾಧಿಗಳ ಬಳಿ ನಮಾಝ್ ಮಾಡುವುದನ್ನು ನಿಷೇಧಿಸಲಾಗಿದೆ.

التصنيفات

Virtues of Surahs and Verses