إعدادات العرض
ನನ್ನ ಹೌದ್ (ಕೊಳ) ಒಂದು ತಿಂಗಳ ಪ್ರಯಾಣದಷ್ಟಿದೆ. ಅದರ ನೀರು ಹಾಲಿಗಿಂತಲೂ ಬೆಳ್ಳಗೆ ಮತ್ತು ಅದರ ಪರಿಮಳ ಕಸ್ತೂರಿಗಿಂತಲೂ ಉತ್ತಮವಾಗಿದೆ
ನನ್ನ ಹೌದ್ (ಕೊಳ) ಒಂದು ತಿಂಗಳ ಪ್ರಯಾಣದಷ್ಟಿದೆ. ಅದರ ನೀರು ಹಾಲಿಗಿಂತಲೂ ಬೆಳ್ಳಗೆ ಮತ್ತು ಅದರ ಪರಿಮಳ ಕಸ್ತೂರಿಗಿಂತಲೂ ಉತ್ತಮವಾಗಿದೆ
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನನ್ನ ಹೌದ್ (ಕೊಳ) ಒಂದು ತಿಂಗಳ ಪ್ರಯಾಣದಷ್ಟಿದೆ. ಅದರ ನೀರು ಹಾಲಿಗಿಂತಲೂ ಬೆಳ್ಳಗೆ ಮತ್ತು ಅದರ ಪರಿಮಳ ಕಸ್ತೂರಿಗಿಂತಲೂ ಉತ್ತಮವಾಗಿದೆ. ಅದರ ಲೋಟಗಳು ಆಕಾಶದಲ್ಲಿರುವ ನಕ್ಷತ್ರಗಳಂತಿವೆ. ಯಾರು ಅದರ ನೀರನ್ನು ಕುಡಿಯುತ್ತಾರೋ ಅವರಿಗೆ ಮತ್ತೆ ಎಂದಿಗೂ ದಾಹವಾಗುವುದಿಲ್ಲ."
[صحيح] [متفق عليه]
الترجمة
العربية English မြန်မာ Svenska Čeština ગુજરાતી Yorùbá Nederlands اردو Español Bahasa Indonesia ئۇيغۇرچە বাংলা Türkçe Bosanski සිංහල हिन्दी Tiếng Việt Hausa മലയാളം తెలుగు Kiswahili پښتو অসমীয়া Shqip دری Ελληνικά Български Fulfulde Кыргызча Lietuvių or Română Kinyarwanda Српски тоҷикӣ O‘zbek नेपाली Moore Kurdî Wolof Soomaali Français Azərbaycan Tagalog Українська bm தமிழ் Deutsch ქართული Português Македонски Magyar فارسی Русский 中文 ភាសាខ្មែរ አማርኛ Malagasy Oromooالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಪುನರುತ್ಥಾನ ದಿನ ಅವರಿಗೆ ಒಂದು ಕೊಳ (ಹೌದ್) ಇರಲಿದೆ. ಅದರ ಉದ್ದ ಮತ್ತು ಅಗಲ ಒಂದು ತಿಂಗಳ ಪ್ರಯಾಣದಷ್ಟಿದೆ. ಅದರ ನೀರು ಹಾಲಿಗಿಂತಲೂ ಹೆಚ್ಚು ಬೆಳ್ಳಗಿದೆ. ಅದರ ಪರಿಮಳವು ಕಸ್ತೂರಿಯ ಪರಿಮಳಕ್ಕಿಂತಲೂ ಉತ್ತಮ ಮತ್ತು ಆಹ್ಲಾದಕರವಾಗಿದೆ. ಅದರ ಲೋಟಗಳು ಆಕಾಶದಲ್ಲಿರುವ ನಕ್ಷತ್ರಗಳ ಸಂಖ್ಯೆಯಷ್ಟಿವೆ. ಆ ಲೋಟಗಳ ಮೂಲಕ ಆ ಕೊಳದ ನೀರನ್ನು ಕುಡಿಯುವವರಿಗೆ ಮತ್ತೆ ಎಂದಿಗೂ ದಾಹವಾಗುವುದಿಲ್ಲ.فوائد الحديث
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೊಳ ಎಂದರೆ ನೀರು ತುಂಬಿರುವ ಒಂದು ದೊಡ್ಡ ಸರೋವರವಾಗಿದ್ದು ಪುನರುತ್ಥಾನ ದಿನದಂದು ಅವರ ಸಮುದಾಯದ ಸತ್ಯವಿಶ್ವಾಸಿಗಳು ಅದರ ನೀರನ್ನು ಕುಡಿಯುತ್ತಾರೆ.
ಆ ಕೊಳದ ನೀರನ್ನು ಕುಡಿದವರಿಗೆ ಸಿಗುವ ಅನುಗ್ರಹವೇನೆಂದರೆ, ಅವರಿಗೆ ಮತ್ತೆ ಎಂದಿಗೂ ದಾಹವಾಗುವುದಿಲ್ಲ.
التصنيفات
ಅಂತ್ಯದಿನದಲ್ಲಿ ವಿಶ್ವಾಸವಿಡುವುದು