إعدادات العرض
ನೀವು ಉರಿಸುವ ಬೆಂಕಿ ನರಕದ ಬೆಂಕಿಯ ಎಪ್ಪತ್ತನೇ ಒಂದು ಭಾಗವಾಗಿದೆ
ನೀವು ಉರಿಸುವ ಬೆಂಕಿ ನರಕದ ಬೆಂಕಿಯ ಎಪ್ಪತ್ತನೇ ಒಂದು ಭಾಗವಾಗಿದೆ
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಉರಿಸುವ ಬೆಂಕಿ ನರಕದ ಬೆಂಕಿಯ ಎಪ್ಪತ್ತನೇ ಒಂದು ಭಾಗವಾಗಿದೆ." ಆಗ ಒಬ್ಬರು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಈ ಬೆಂಕಿಯೇ ಸಾಕಷ್ಟು ಬಿಸಿಯಾಗಿದೆ." ಅವರು ಹೇಳಿದರು: "ಈ ಬೆಂಕಿಗೆ ಅರುವತ್ತೊಂಬತ್ತು ಭಾಗಗಳನ್ನು ಸೇರಿಸಲಾಗುತ್ತದೆ. ಪ್ರತಿಯೊಂದು ಭಾಗವೂ ಅದರಷ್ಟೇ ಉರಿಯನ್ನು ಹೊಂದಿದೆ."
[صحيح] [متفق عليه]
الترجمة
العربية English မြန်မာ Svenska Čeština ગુજરાતી አማርኛ Yorùbá Nederlands اردو Español Bahasa Indonesia ئۇيغۇرچە বাংলা Türkçe Bosanski සිංහල हिन्दी Tiếng Việt Hausa മലയാളം తెలుగు Kiswahili ไทย پښتو অসমীয়া Shqip دری Ελληνικά Български Fulfulde Italiano Кыргызча Lietuvių Malagasy Română Kinyarwanda Српски тоҷикӣ O‘zbek नेपाली Moore or Kurdî Oromoo Soomaali Français Wolof Azərbaycan Tagalog Українська தமிழ் bm Deutsch ქართული Português Македонски Magyar Lingala فارسی Русский 中文الشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಇಹಲೋಕದ ಬೆಂಕಿಯು ನರಕದ ಬೆಂಕಿಯ ಎಪ್ಪತ್ತನೇ ಒಂದು ಭಾಗವಾಗಿದೆ. ಅಂದರೆ, ಪರಲೋಕದ ಬೆಂಕಿಯು ಇಹಲೋಕದ ಬೆಂಕಿಗಿಂತ ಅರುವತ್ತೊಂಬತ್ತು ಪಟ್ಟು ಹೆಚ್ಚು ಉರಿಯುವ ಶಕ್ತಿಯನ್ನು ಹೊಂದಿದೆ. ಪ್ರತಿಯೊಂದು ಭಾಗವೂ ಇಹಲೋಕದ ಬೆಂಕಿಯಷ್ಟೇ ಉರಿಯನ್ನು ಹೊಂದಿದೆ. ಆಗ ಒಬ್ಬರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನರಕವಾಸಿಗಳನ್ನು ಶಿಕ್ಷಿಸಲು ಇಹಲೋಕದ ಬೆಂಕಿ ಸಾಕಷ್ಟು ಉರಿಯನ್ನು ಹೊಂದಿದೆಯಲ್ಲವೇ!" ಆಗ ಅವರು ಹೇಳಿದರು: "ಪರಲೋಕದ ಬೆಂಕಿಗೆ ಇಹಲೋಕದ ಬೆಂಕಿಗಿಂತ ಅರುವತ್ತೊಂಬತ್ತು ಭಾಗ ಹೆಚ್ಚು ಉರಿಯನ್ನು ನೀಡಲಾಗಿದೆ. ಪ್ರತಿಯೊಂದು ಭಾಗವೂ ಇಹಲೋಕದ ಬೆಂಕಿಯಷ್ಟೇ ಉರಿಯನ್ನು ಹೊಂದಿವೆ."فوائد الحديث
ಜನರನ್ನು ನರಕಕ್ಕೆ ತಲುಪಿಸುವ ಕಾರ್ಯಗಳಿಂದ ದೂರವಿರುವುದಕ್ಕಾಗಿ ಈ ಹದೀಸಿನಲ್ಲಿ ನರಕದ ಕುರಿತು ಎಚ್ಚರಿಕೆ ನೀಡಲಾಗಿದೆ.
ನರಕದ ಬೆಂಕಿಯ ಭಯಾನಕತೆ, ಅದರ ಶಿಕ್ಷೆ ಮತ್ತು ಅದರ ಉರಿಯ ಕಠೋರತೆಯನ್ನು ಈ ಹದೀಸಿನಲ್ಲಿ ವಿವರಿಸಲಾಗಿದೆ.