ನಂತರ ಆ ದಿನದಂದು (ನಿಮಗೆ ದಯಪಾಲಿಸಲಾದ) ಎಲ್ಲಾ ಅನುಗ್ರಹಗಳ ಬಗ್ಗೆ ನಿಮ್ಮೊಡನೆ ಖಂಡಿತವಾಗಿಯೂ ಪ್ರಶ್ನಿಸಲಾಗುವುದು

ನಂತರ ಆ ದಿನದಂದು (ನಿಮಗೆ ದಯಪಾಲಿಸಲಾದ) ಎಲ್ಲಾ ಅನುಗ್ರಹಗಳ ಬಗ್ಗೆ ನಿಮ್ಮೊಡನೆ ಖಂಡಿತವಾಗಿಯೂ ಪ್ರಶ್ನಿಸಲಾಗುವುದು

ಝುಬೈರ್ ಇಬ್ನ್ ಅಲ್ಅವ್ವಾಮ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ನಂತರ ಆ ದಿನದಂದು (ನಿಮಗೆ ದಯಪಾಲಿಸಲಾದ) ಎಲ್ಲಾ ಅನುಗ್ರಹಗಳ ಬಗ್ಗೆ ನಿಮ್ಮೊಡನೆ ಖಂಡಿತವಾಗಿಯೂ ಪ್ರಶ್ನಿಸಲಾಗುವುದು." [ಅತ್ತಕಾಸುರ್ 102:8] ಎಂಬ ವಚನವು ಅವತೀರ್ಣವಾದಾಗ, ಝುಬೈರ್ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಯಾವ ಅನುಗ್ರಹದ ಬಗ್ಗೆ ನಮ್ಮೊಡನೆ ಪ್ರಶ್ನಿಸಲಾಗುತ್ತದೆ? ನಮ್ಮಲ್ಲಿರುವುದು ಎರಡು ಕಪ್ಪು ವಸ್ತುಗಳು—،ಖರ್ಜೂರ ಮತ್ತು ನೀರು ಮಾತ್ರವಲ್ಲವೇ? ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅದು ಖಂಡಿತವಾಗಿಯೂ ಸಂಭವಿಸುತ್ತದೆ."

[حسن] [رواه الترمذي وابن ماجه]

الشرح

ಈ ವಚನವು ಅವತೀರ್ಣವಾದಾಗ: "ನಂತರ ಆ ದಿನದಂದು (ನಿಮಗೆ ದಯಪಾಲಿಸಲಾದ) ಎಲ್ಲಾ ಅನುಗ್ರಹಗಳ ಬಗ್ಗೆ ನಿಮ್ಮೊಡನೆ ಖಂಡಿತವಾಗಿಯೂ ಪ್ರಶ್ನಿಸಲಾಗುವುದು." ಅಂದರೆ, ಅಲ್ಲಾಹು ನಿಮಗೆ ಅನುಗ್ರಹಿಸಿದ ಅನುಗ್ರಹಗಳಿಗೆ ನೀವು ಕೃತಜ್ಞರಾಗಿದ್ದೀರಾ ಎಂದು ನಿಮ್ಮೊಡನೆ ಪ್ರಶ್ನಿಸಲಾಗುವುದು. ಆಗ ಝುಬೈರ್ ಬಿನ್ ಅವ್ವಾಮ್ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಮ್ಮೊಂದಿಗೆ ಯಾವ ಅನುಗ್ರಹದ ಬಗ್ಗೆ ಪ್ರಶ್ನಿಸಲಾಗುತ್ತದೆ? ನಮ್ಮಲ್ಲಿರುವ ಎರಡು ಅನುಗ್ರಹಗಳು ಖರ್ಜೂರ ಮತ್ತು ನೀರು ಆಗಿದ್ದು, ಅದು ಪ್ರಶ್ನಿಸಲಾಗುವಷ್ಟು ದೊಡ್ಡ ಅನುಗ್ರಹಗಳಲ್ಲವಲ್ಲ?" ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಈಗ ನೀವು ಯಾವ ಸ್ಥಿತಿಯಲ್ಲಿದ್ದೀರೋ ಆ ಅನುಗ್ರಹಗಳ ಬಗ್ಗೆಯೂ ನಿಮ್ಮಲ್ಲಿ ಪ್ರಶ್ನಿಸಲಾಗುವುದು. ಇವೆರಡು (ಖರ್ಜೂರ ಮತ್ತು ನೀರು) ಅಲ್ಲಾಹನ ಅನುಗ್ರಹಗಳಲ್ಲಿ ಸೇರಿದ ಎರಡು ಮಹಾ ಅನುಗ್ರಹಗಳಾಗಿವೆ."

فوائد الحديث

ಅಲ್ಲಾಹನ ಅನುಗ್ರಹಗಳಿಗೆ ಕೃತಜ್ಞರಾಗಿರಬೇಕೆಂದು ಒತ್ತುಕೊಟ್ಟು ಹೇಳಲಾಗಿದೆ.

ಅನುಗ್ರಹಗಳು ಕಡಿಮೆಯಾಗಿದ್ದರೂ ಹೆಚ್ಚಾಗಿದ್ದರೂ ಅದರ ಬಗ್ಗೆ ಪುನರುತ್ಥಾನದ ದಿನದಂದು ಮನುಷ್ಯರೊಡನೆ ಪ್ರಶ್ನಿಸಲಾಗುತ್ತದೆ.

التصنيفات

The Hereafter Life, Asceticism and Piety, States of the Righteous Believers, Interpretation of verses