ನಿಮ್ಮಲ್ಲೊಬ್ಬರು ವುದೂ ನಿರ್ವಹಿಸಿದ ನಂತರ ಚರ್ಮದ ಪಾದರಕ್ಷೆ ಧರಿಸಿದರೆ, ಅದನ್ನು ಧರಿಸಿಯೇ ನಮಾಝ್ ನಿರ್ವಹಿಸಲಿ. ಅದರ ಮೇಲೆ…

ನಿಮ್ಮಲ್ಲೊಬ್ಬರು ವುದೂ ನಿರ್ವಹಿಸಿದ ನಂತರ ಚರ್ಮದ ಪಾದರಕ್ಷೆ ಧರಿಸಿದರೆ, ಅದನ್ನು ಧರಿಸಿಯೇ ನಮಾಝ್ ನಿರ್ವಹಿಸಲಿ. ಅದರ ಮೇಲೆ ಸವರಿಕೊಳ್ಳಲಿ. ನಂತರ ಅವರು ಬಯಸಿದರೆ ಅದನ್ನು ಕಳಚದೆಯೇ ಇರಬಹುದು. ಆದರೆ ದೊಡ್ಡ ಅಶುದ್ಧಿ ಉಂಟಾದರೆ ಹೊರತು

ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲೊಬ್ಬರು ವುದೂ ನಿರ್ವಹಿಸಿದ ನಂತರ ಚರ್ಮದ ಪಾದರಕ್ಷೆ ಧರಿಸಿದರೆ, ಅದನ್ನು ಧರಿಸಿಯೇ ನಮಾಝ್ ನಿರ್ವಹಿಸಲಿ. ಅದರ ಮೇಲೆ ಸವರಿಕೊಳ್ಳಲಿ. ನಂತರ ಅವರು ಬಯಸಿದರೆ ಅದನ್ನು ಕಳಚದೆಯೇ ಇರಬಹುದು. ಆದರೆ ದೊಡ್ಡ ಅಶುದ್ಧಿ ಉಂಟಾದರೆ ಹೊರತು."

[صحيح] [رواه الدارقطني]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಒಬ್ಬ ಮುಸಲ್ಮಾನನು ವುದೂ ನಿರ್ವಹಿಸಿದ ನಂತರ ಚರ್ಮದ ಪಾದರಕ್ಷೆಯನ್ನು ಧರಿಸುತ್ತಾನೆ. ನಂತರ ಅವನಿಗೆ ಅಶುದ್ಧಿಯುಂಟಾಗಿ ವುದೂ ಮಾಡಬೇಕಾಗಿ ಬರುತ್ತದೆ. ಆಗ ಅವನು ಬಯಸಿದರೆ, ಅವುಗಳ ಮೇಲೆ ಸವರಿದರೆ ಸಾಕು. ಅವನು ಅವುಗಳನ್ನು ಧರಿಸಿಯೇ ನಮಾಝ್ ನಿರ್ವಹಿಸಬಹುದು. ಒಂದು ನಿರ್ದಿಷ್ಟ ಅವಧಿಯ ತನಕ ಅವನು ಅವುಗಳನ್ನು ಕಳಚಬೇಕಾಗಿಲ್ಲ. ಆದರೆ ಅವನಿಗೆ ದೊಡ್ಡ ಅಶುದ್ಧಿ (ಜನಾಬತ್) ಉಂಟಾದರೆ ಅವನು ಅವುಗಳನ್ನು ಕಳಚಿ ಸ್ನಾನ ಮಾಡುವುದು ಅನಿವಾರ್ಯವಾಗಿದೆ.

فوائد الحديث

ಪೂರ್ಣರೂಪದಲ್ಲಿ ವುದೂ ನಿರ್ವಹಿಸಿದ ನಂತರ ಪಾದರಕ್ಷೆ ಧರಿಸಿದರೆ ಮಾತ್ರ ಅವುಗಳ ಮೇಲೆ ಸವರಬಹುದು.

ಸವರುವ ಅವಧಿ: ನಿವಾಸಿಗಳು (ಪ್ರಯಾಣಿಕರಲ್ಲದವರು) ಒಂದು ಇಡೀ ದಿನ ಮತ್ತು ರಾತ್ರಿ (24 ತಾಸು). ಪ್ರಯಾಣಿಕರು ನಿರಂತರ ಮೂರು ದಿನ ಮತ್ತು ರಾತ್ರಿ (72 ತಾಸು).

ಪಾದರಕ್ಷೆಗಳ ಮೇಲೆ ಸವರುವುದು ನಿರ್ದಿಷ್ಟವಾಗಿ ಸಣ್ಣ ಅಶುದ್ಧಿಗಾಗಿದೆಯೇ ಹೊರತು ದೊಡ್ಡ ಅಶುದ್ಧಿಗಲ್ಲ. ದೊಡ್ಡ ಅಶುದ್ಧಿ ಇರುವವರು ಪಾದರಕ್ಷೆಗಳ ಮೇಲೆ ಸವರಬಾರದು. ಅವರು ಪಾದರಕ್ಷೆಗಳನ್ನು ಕಳಚಿ ಪಾದಗಳನ್ನು ತೊಳೆಯುವುದು ಕಡ್ಡಾಯವಾಗಿದೆ.

ಯಹೂದಿಗಳಿಗೆ ವಿರುದ್ಧವಾಗುವುದಕ್ಕಾಗಿ ಶೂ ಮತ್ತು ಚಪ್ಪಲಿಗಳನ್ನು ಧರಿಸಿ ನಮಾಝ್ ಮಾಡುವುದು ಅಪೇಕ್ಷಣೀಯವಾಗಿದೆ. ಆದರೆ ಅವು ಶುದ್ಧವಾಗಿರಬೇಕು ಮತ್ತು ಅದರಿಂದ ಇತರರಿಗೆ ತೊಂದರೆಯಾಗಬಾರದು. ಆಧುನಿಕ ಮಸೀದಿಗಳಂತೆ ಜಮಾಖಾನೆ ಹಾಸಲಾಗಿರುವ ಮಸೀದಿಗಳಲ್ಲಿ ಪಾದರಕ್ಷೆ ಧರಿಸಿ ನಮಾಝ್ ಮಾಡಬಾರದು.

ಪಾದರಕ್ಷೆಗಳ ಮೇಲೆ ಸವರುವ ನಿಯಮದ ಮೂಲಕ ಸಮುದಾಯಕ್ಕೆ ಸೌಲಭ್ಯ ಮತ್ತು ರಿಯಾಯಿತಿಯನ್ನು ನೀಡಲಾಗಿದೆ.

التصنيفات

Wiping over leather socks and the like