ಪುನರುತ್ಥಾನ ದಿನದಂದು ಸತ್ಯವಿಶ್ವಾಸಿಯ ತಕ್ಕಡಿಯಲ್ಲಿ ಉತ್ತಮ ಗುಣಕ್ಕಿಂತಲೂ ಹೆಚ್ಚು ಭಾರವಿರುವ ಯಾವುದೇ ವಸ್ತುವಿಲ್ಲ. ಅಶ್ಲೀಲ…

ಪುನರುತ್ಥಾನ ದಿನದಂದು ಸತ್ಯವಿಶ್ವಾಸಿಯ ತಕ್ಕಡಿಯಲ್ಲಿ ಉತ್ತಮ ಗುಣಕ್ಕಿಂತಲೂ ಹೆಚ್ಚು ಭಾರವಿರುವ ಯಾವುದೇ ವಸ್ತುವಿಲ್ಲ. ಅಶ್ಲೀಲ ಮತ್ತು ಅಸಭ್ಯವಾಗಿ ಮಾತನಾಡುವವರನ್ನು ಅಲ್ಲಾಹು ದ್ವೇಷಿಸುತ್ತಾನೆ

ಅಬೂ ದರ್ದಾಅ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಪುನರುತ್ಥಾನ ದಿನದಂದು ಸತ್ಯವಿಶ್ವಾಸಿಯ ತಕ್ಕಡಿಯಲ್ಲಿ ಉತ್ತಮ ಗುಣಕ್ಕಿಂತಲೂ ಹೆಚ್ಚು ಭಾರವಿರುವ ಯಾವುದೇ ವಸ್ತುವಿಲ್ಲ. ಅಶ್ಲೀಲ ಮತ್ತು ಅಸಭ್ಯವಾಗಿ ಮಾತನಾಡುವವರನ್ನು ಅಲ್ಲಾಹು ದ್ವೇಷಿಸುತ್ತಾನೆ."

[صحيح] [رواه أبو داود والترمذي]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಪುನರುತ್ಥಾನ ದಿನದಂದು ಸತ್ಯವಿಶ್ವಾಸಿಯ ತಕ್ಕಡಿಯಲ್ಲಿ ಕರ್ಮಗಳು ಮತ್ತು ಮಾತುಗಳ ಪೈಕಿ ಅತ್ಯಂತ ಹೆಚ್ಚು ಭಾರವಿರುವ ವಸ್ತು ಉತ್ತಮ ನಡವಳಿಕೆಯಾಗಿದೆ. ಮಂದಹಾಸ ಬೀರುವುದು, ತೊಂದರೆ ನೀಡದಿರುವುದು ಮತ್ತು ಒಳಿತು ಮಾಡುವುದು ಇದರಲ್ಲಿ ಒಳಪಡುತ್ತವೆ. ಮಾತಿನಲ್ಲಿ ಮತ್ತು ಕ್ರಿಯೆಯಲ್ಲಿ ದುರ್ವರ್ತನೆ ತೋರುವವನನ್ನು ಮತ್ತು ಅಸಭ್ಯವಾಗಿ ಮಾತನಾಡುವವನನ್ನು ಅಲ್ಲಾಹು ದ್ವೇಷಿಸುತ್ತಾನೆ.

فوائد الحديث

ಉತ್ತಮ ನಡವಳಿಕೆಯ ಶ್ರೇಷ್ಠತೆಯನ್ನು ತಿಳಿಸಲಾಗಿದೆ. ಏಕೆಂದರೆ ಅದರಿಂದ ಅಲ್ಲಾಹನ ಪ್ರೀತಿ ಮತ್ತು ಮನುಷ್ಯರ ಪ್ರೀತಿ ಸಹ ದೊರೆಯುತ್ತದೆ. ಅದು ಪುನರುತ್ಥಾನ ದಿನದಂದು ತಕ್ಕಡಿಯಲ್ಲಿ ಅತ್ಯಧಿಕ ಭಾರ ತೂಗುವ ವಸ್ತುವಾಗಿದೆ.

التصنيفات

Praiseworthy Morals, Manners of Speaking and Keeping Silent