ಅಲ್ಲಾಹು ಹೇಳಿದನು: "ಓ ಆದಮನ ಮಗನೇ! ಖರ್ಚು ಮಾಡು. ನಾನು ನಿನಗಾಗಿ ಖರ್ಚು ಮಾಡುತ್ತೇನೆ

ಅಲ್ಲಾಹು ಹೇಳಿದನು: "ಓ ಆದಮನ ಮಗನೇ! ಖರ್ಚು ಮಾಡು. ನಾನು ನಿನಗಾಗಿ ಖರ್ಚು ಮಾಡುತ್ತೇನೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಅಲ್ಲಾಹು ಹೇಳಿದನು: "ಓ ಆದಮನ ಮಗನೇ! ಖರ್ಚು ಮಾಡು. ನಾನು ನಿನಗಾಗಿ ಖರ್ಚು ಮಾಡುತ್ತೇನೆ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಓ ಆದಮನ ಮಗನೇ! ಕಡ್ಡಾಯ ಮತ್ತು ಅಪೇಕ್ಷಣೀಯವಾದ ಎಲ್ಲಾ ಖರ್ಚುಗಳನ್ನು ಮಾಡು. ನೀನು ಖರ್ಚು ಮಾಡಿದರೆ ನಾನು ನಿನ್ನ ಜೀವನೋಪಾಯವನ್ನು ವಿಶಾಲಗೊಳಿಸುತ್ತೇನೆ. ನೀನು ಖರ್ಚು ಮಾಡಿದ್ದಕ್ಕೆ ಬದಲಿಯನ್ನು ನೀಡುತ್ತೇನೆ ಮತ್ತು ನಿನ್ನ ಆಸ್ತಿಯಲ್ಲಿ ಸಮೃದ್ಧಿಯನ್ನು ಹರಿಸುತ್ತೇನೆ.

فوائد الحديث

ಈ ಹದೀಸ್ ದಾನ ಮಾಡಲು ಮತ್ತು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಲು ಒತ್ತಾಯಿಸುತ್ತದೆ.

ಒಳಿತಿನ ಮಾರ್ಗಗಳಲ್ಲಿ ಖರ್ಚು ಮಾಡುವುದು ಜೀವನೋಪಾಯದಲ್ಲಿ ಸಮೃದ್ಧಿಯುಂಟಾಗಲು ಮತ್ತು ಜೀವನೋಪಾಯವು ದ್ವಿಗುಣಗೊಳ್ಳಲು ಅತಿದೊಡ್ಡ ಕಾರಣವಾಗಿದೆ.

ಇದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನಿಂದ ವರದಿ ಮಾಡುವ ಹದೀಸ್ ಆಗಿದ್ದು ಇದನ್ನು ಪವಿತ್ರ (ಕುದ್ಸಿ) ಅಥವಾ ದೈವಿಕ ಹದೀಸ್ ಎಂದು ಕರೆಯಲಾಗುತ್ತದೆ. ಇಂತಹ ಹದೀಸ್‌ಗಳ ಪದಗಳು ಮತ್ತು ಅದರ ಅರ್ಥವು ಅಲ್ಲಾಹನದ್ದೇ ಆಗಿವೆ. ಆದರೆ ಇವುಗಳಿಗೆ ಕುರ್‌ಆನ್‌ನ ವಚನಗಳಿಗೆ ಇರುವ ವಿಶೇಷತೆಗಳಿಲ್ಲ. ಅಂದರೆ ಈ ವಚನಗಳನ್ನು ಪಠಿಸುವುದು ಆರಾಧನೆಯಲ್ಲ, ಇವುಗಳನ್ನು ಸ್ಪರ್ಶಿಸಲು ಶುದ್ಧಿಯಿರಬೇಕಾದ ಅಗತ್ಯವಿಲ್ಲ ಮತ್ತು ಇವು ಸವಾಲಿನ ರೂಪದಲ್ಲಿ ಅಥವಾ ಪವಾಡದ ರೂಪದಲ್ಲಿ ಅವತೀರ್ಣವಾಗಿಲ್ಲ.

التصنيفات

Expenses, Voluntary Charity