ಮಗೂ, ಅಲ್ಲಾಹನ ಹೆಸರನ್ನು ಉಚ್ಛರಿಸು, ನಿನ್ನ ಬಲಗೈಯಿಂದ ಸೇವಿಸು, ಮತ್ತು ನಿನ್ನ ಹತ್ತಿರದಲ್ಲಿರುವುದನ್ನೇ ಸೇವಿಸು

ಮಗೂ, ಅಲ್ಲಾಹನ ಹೆಸರನ್ನು ಉಚ್ಛರಿಸು, ನಿನ್ನ ಬಲಗೈಯಿಂದ ಸೇವಿಸು, ಮತ್ತು ನಿನ್ನ ಹತ್ತಿರದಲ್ಲಿರುವುದನ್ನೇ ಸೇವಿಸು

ಉಮರ್ ಬಿನ್ ಅಬೂ ಸಲಮ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಮಗುವಾಗಿದ್ದಾಗ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆರೈಕೆಯಲ್ಲಿದ್ದೆ. ನನ್ನ ಕೈ, ಬಟ್ಟಲಲ್ಲಿ ಅತ್ತಿತ್ತ ಹರಿದಾಡುತ್ತಿತ್ತು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮಗೂ, ಅಲ್ಲಾಹನ ಹೆಸರನ್ನು ಉಚ್ಛರಿಸು, ನಿನ್ನ ಬಲಗೈಯಿಂದ ಸೇವಿಸು, ಮತ್ತು ನಿನ್ನ ಹತ್ತಿರದಲ್ಲಿರುವುದನ್ನೇ ಸೇವಿಸು." ನಂತರ ಇದೇ ನನ್ನ ಆಹಾರ ಸೇವನೆಯ ವಿಧಾನವಾಯಿತು.

[صحيح] [متفق عليه]

الشرح

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪತ್ನಿ ಉಮ್ಮು ಸಲಮಾರ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ಪುತ್ರನಾದ ಉಮರ್ ಬಿನ್ ಅಬೂ ಸಲಮ (ಅವರಿಬ್ಬರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ)—ಅವರು ಚಿಕ್ಕವರಿದ್ದಾಗ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆರೈಕೆ ಮತ್ತು ಪಾಲನೆಯಲ್ಲಿ ಬೆಳೆಯುತ್ತಿದ್ದರು—ಇಲ್ಲಿ ತಿಳಿಸುವುದೇನೆಂದರೆ, ಅವರು ಆಹಾರ ಸೇವಿಸುವಾಗ ಅವರ ಕೈ ಬಟ್ಟಲಿನ ಎಲ್ಲಾ ಭಾಗಗಳಲ್ಲೂ ಹರಿದಾಡುತ್ತಿತ್ತು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಆಹಾರ ಸೇವನೆಯ ಮೂರು ಶಿಷ್ಟಾಚಾರಗಳನ್ನು ಕಲಿಸಿಕೊಟ್ಟರು: 1. ಆಹಾರ ಸೇವನೆಯ ಆರಂಭದಲ್ಲಿ ಬಿಸ್ಮಿಲ್ಲಾಹ್ ಎಂದು ಹೇಳುವುದು. 2. ಬಲಗೈಯಿಂದ ಆಹಾರ ಸೇವಿಸುವುದು. 3. ತನಗೆ ಹತ್ತಿರವಾದ ಮುಂದಿನ ಭಾಗದಿಂದ ಆಹಾರವನ್ನು ಸೇವಿಸುವುದು.

فوائد الحديث

ಪ್ರಾರಂಭದಲ್ಲಿ ಬಿಸ್ಮಿಲ್ಲಾಹ್ ಹೇಳುವುದು ಆಹಾರ-ಪಾನೀಯ ಸೇವನೆಯ ಶಿಷ್ಟಾಚಾರಗಳಲ್ಲಿ ಒಂದಾಗಿದೆ.

ಮಕ್ಕಳಿಗೆ ಶಿಷ್ಟಾಚಾರಗಳನ್ನು ಕಲಿಸಿಕೊಡಬೇಕಾದ ಪ್ರಾಮುಖ್ಯತೆಯನ್ನು ತಿಳಿಸಲಾಗಿದೆ. ವಿಶೇಷವಾಗಿ ತನ್ನ ಆರೈಕೆಯಲ್ಲಿರುವ ಮಕ್ಕಳಿಗೆ.

ಮಕ್ಕಳಿಗೆ ಶಿಸ್ತು ಕಲಿಸುವುದರಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತೋರಿದ ಮೃದುತ್ವ ಮತ್ತು ವಿಶಾಲ ಮನೋಭಾವವನ್ನು ತಿಳಿಸಲಾಗಿದೆ.

ನೇರ ಮುಂದಿರುವ ಭಾಗದಿಂದ ಆಹಾರ ಸೇವಿಸುವುದು ಆಹಾರ-ಪಾನೀಯ ಸೇವನೆಯ ಶಿಷ್ಟಾಚಾರಗಳಲ್ಲಿ ಒಳಪಡುತ್ತದೆ. ಆದರೆ ಪಾತ್ರೆಯಲ್ಲಿ ಅನೇಕ ತರಹದ ತಿಂಡಿಗಳಿದ್ದರೆ, ಬೇರೆ ಬೇರೆ ಭಾಗಗಳಿಂದ ಸೇವಿಸಬಹುದು.

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬೋಧನೆಗಳಿಗೆ ಸಹಾಬಿಗಳು ತೋರುತ್ತಿದ್ದ ನಿಷ್ಠೆಯನ್ನು ತಿಳಿಸಲಾಗಿದೆ. "ನಂತರ ಇದೇ ನನ್ನ ಆಹಾರ ಸೇವನೆಯ ವಿಧಾನವಾಯಿತು" ಎಂಬ ಉಮರ್ ಬಿನ್ ಅಬೂ ಸಲಮರ ಮಾತು ಇದನ್ನು ಸೂಚಿಸುತ್ತದೆ.

التصنيفات

Manners of Eating and Drinking