'ಫರಾಇದ್'ಗಳನ್ನು (ಆಸ್ತಿಯ ನಿಗದಿತ ಪಾಲುಗಳನ್ನು) ಅವುಗಳ ಹಕ್ಕುದಾರರಿಗೆ ತಲುಪಿಸಿರಿ. ನಂತರ ಏನು ಉಳಿಯುತ್ತದೆಯೋ, ಅದು ಅತ್ಯಂತ…

'ಫರಾಇದ್'ಗಳನ್ನು (ಆಸ್ತಿಯ ನಿಗದಿತ ಪಾಲುಗಳನ್ನು) ಅವುಗಳ ಹಕ್ಕುದಾರರಿಗೆ ತಲುಪಿಸಿರಿ. ನಂತರ ಏನು ಉಳಿಯುತ್ತದೆಯೋ, ಅದು ಅತ್ಯಂತ ಹತ್ತಿರದ ಪುರುಷ ಸಂಬಂಧಿಗೆ ಸೇರುತ್ತದೆ

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: " 'ಫರಾಇದ್'ಗಳನ್ನು (ಆಸ್ತಿಯ ನಿಗದಿತ ಪಾಲುಗಳನ್ನು) ಅವುಗಳ ಹಕ್ಕುದಾರರಿಗೆ ತಲುಪಿಸಿರಿ. ನಂತರ ಏನು ಉಳಿಯುತ್ತದೆಯೋ, ಅದು ಅತ್ಯಂತ ಹತ್ತಿರದ ಪುರುಷ ಸಂಬಂಧಿಗೆ ಸೇರುತ್ತದೆ".

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಆದೇಶಿಸುವುದೇನೆಂದರೆ, ಪಿತ್ರಾರ್ಜಿತ ಆಸ್ತಿಯನ್ನು ಹಂಚುವ ಜವಾಬ್ದಾರಿ ಹೊತ್ತವರು, ಅದನ್ನು ಅಲ್ಲಾಹು ಆದೇಶಿಸಿದಂತೆ ಅದರ ಹಕ್ಕುದಾರರಿಗೆ ನ್ಯಾಯಯುತವಾದ ಶರೀಅತ್ ಸಮ್ಮತ ಹಂಚಿಕೆಯ ಮೂಲಕ ವಿತರಿಸಬೇಕು. ಅಲ್ಲಾಹನ ಗ್ರಂಥದಲ್ಲಿ ನಿಗದಿಪಡಿಸಲಾದ ಪಾಲುಗಳನ್ನು ಹೊಂದಿರುವವರಿಗೆ ಅವರ ಪಾಲುಗಳನ್ನು ನೀಡಬೇಕು. ಅವು: ಮೂರನೇ ಎರಡಂಶ (2/3), ಮೂರನೇ ಒಂದಂಶ (1/3), ಆರನೇ ಒಂದಂಶ (1/6), ಅರ್ಧ (1/2), ಕಾಲು ಭಾಗ (1/4), ಮತ್ತು ಎಂಟನೇ ಒಂದಂಶ (1/8) ಆಗಿರುತ್ತದೆ. ನಂತರ ಏನು ಉಳಿಯುತ್ತದೆಯೋ, ಅದನ್ನು ಮೃತ ವ್ಯಕ್ತಿಗೆ ಪುರುಷರಲ್ಲಿ ಯಾರು ಅತ್ಯಂತ ಹತ್ತಿರದವರೋ ಅವರಿಗೆ ನೀಡಬೇಕು. ಅವರನ್ನು 'ಅಸಬಾ' (ಉಳಿಕೆ ಪಾಲುದಾರರು) ಎಂದು ಕರೆಯಲಾಗುತ್ತದೆ.

فوائد الحديث

ಈ ಹದೀಸ್ ಪಿತ್ರಾರ್ಜಿತ ಆಸ್ತಿಯ ಹಂಚಿಕೆಯಲ್ಲಿ ಒಂದು ಮೂಲಭೂತ ನಿಯಮವಾಗಿದೆ.

ನಿಗದಿತ ಪಾಲುಗಳ ಹಂಚಿಕೆಯು 'ಅಹ್ಲುಲ್ ಫರಾಇದ್' (ನಿಗದಿತ ಪಾಲುದಾರರು) ರಿಂದ ಪ್ರಾರಂಭವಾಗುತ್ತದೆ.

ನಿಗದಿತ ಪಾಲುಗಳನ್ನು ನೀಡಿದ ನಂತರ ಉಳಿದಿರುವುದು 'ಅಸಬಾ'ಗೆ ಸೇರುತ್ತದೆ.

ಅತ್ಯಂತ ಹತ್ತಿರದವರಿಗೆ, ನಂತರ ಹತ್ತಿರದವರಿಗೆ ಆದ್ಯತೆ ನೀಡಲಾಗುತ್ತದೆ. ಆದ್ದರಿಂದ, ತಂದೆಯಂತಹ ಹತ್ತಿರದ 'ಅಸಬಾ' ಇರುವಾಗ, ಚಿಕ್ಕಪ್ಪ/ದೊಡ್ಡಪ್ಪನಂತಹ ದೂರದ 'ಅಸಬಾ'ಗೆ ಪಿತ್ರಾರ್ಜಿತದಲ್ಲಿ ಪಾಲು ಸಿಗುವುದಿಲ್ಲ.

ಒಂದು ವೇಳೆ ನಿಗದಿತ ಪಾಲುಗಳೇ ಸಂಪೂರ್ಣ ಆಸ್ತಿಯನ್ನು ಆವರಿಸಿದರೆ, ಅಂದರೆ ಅದರಿಂದ ಏನೂ ಉಳಿಯದಿದ್ದರೆ, 'ಅಸಬಾ'ಗೆ ಏನೂ ಸಿಗುವುದಿಲ್ಲ.

التصنيفات

Agnates