ನಿಶ್ಚಯವಾಗಿಯೂ ನಾನು ನನ್ನ ಕೊಳದ ಬಳಿಯಿದ್ದು ನೀವು ಅದರ ನೀರು ಕುಡಿಯಲು ಬರುವುದನ್ನು ನಾನು ನೋಡುತ್ತೇನೆ. ಆದರೆ ಕೆಲವು ಜನರನ್ನು…

ನಿಶ್ಚಯವಾಗಿಯೂ ನಾನು ನನ್ನ ಕೊಳದ ಬಳಿಯಿದ್ದು ನೀವು ಅದರ ನೀರು ಕುಡಿಯಲು ಬರುವುದನ್ನು ನಾನು ನೋಡುತ್ತೇನೆ. ಆದರೆ ಕೆಲವು ಜನರನ್ನು ಅಲ್ಲಿಗೆ ಬರದಂತೆ ತಡೆಹಿಡಿಯಲಾಗುತ್ತದೆ. ಆಗ ನಾನು ಹೇಳುತ್ತೇನೆ: "ಓ ನನ್ನ ಪರಿಪಾಲಕನೇ! ಅವರು ನನ್ನವರು ಮತ್ತು ನನ್ನ ಸಮುದಾಯದವರು

ಅಸ್ಮಾ ಬಿಂತ್ ಅಬೂಬಕರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ನಾನು ನನ್ನ ಕೊಳದ ಬಳಿಯಿದ್ದು ನೀವು ಅದರ ನೀರು ಕುಡಿಯಲು ಬರುವುದನ್ನು ನಾನು ನೋಡುತ್ತೇನೆ. ಆದರೆ ಕೆಲವು ಜನರನ್ನು ಅಲ್ಲಿಗೆ ಬರದಂತೆ ತಡೆಹಿಡಿಯಲಾಗುತ್ತದೆ. ಆಗ ನಾನು ಹೇಳುತ್ತೇನೆ: "ಓ ನನ್ನ ಪರಿಪಾಲಕನೇ! ಅವರು ನನ್ನವರು ಮತ್ತು ನನ್ನ ಸಮುದಾಯದವರು." ಆಗ ನನ್ನೊಂದಿಗೆ ಹೇಳಲಾಗುತ್ತದೆ: "ನಿಮ್ಮ ನಂತರ ಅವರು ಏನು ಮಾಡಿದ್ದಾರೆಂದು ನಿಮಗೆ ಗೊತ್ತಿದೆಯೇ? ಅಲ್ಲಾಹನಾಣೆ! ಅವರು ಬಹಳ ಬೇಗ ತಮ್ಮ ಹಿಮ್ಮಡಿಗಳಲ್ಲಿ ಮರಳಿಹೋಗಿದ್ದರು."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಪುನರುತ್ಥಾನ ದಿನದಂದು ಅವರು ಅವರ ಕೊಳದ ಬಳಿಯಿದ್ದು ಅವರ ಸಮುದಾಯದಲ್ಲಿ ಸೇರಿದವರು ಅಲ್ಲಿಗೆ ಬರುವುದನ್ನು ನೋಡುತ್ತಾ ಇರುತ್ತಾರೆ. ಅವರ ಸಮೀಪಕ್ಕೆ ಬಂದ ಕೆಲವು ಜನರನ್ನು ತಡೆಯಲಾಗುತ್ತದೆ. ಆಗ ಅವರು ಹೇಳುತ್ತಾರೆ: "ಓ ನನ್ನ ಪರಿಪಾಲಕನೇ! ಅವರು ನನ್ನವರು ಮತ್ತು ನನ್ನ ಸಮುದಾಯದವರು." ಆಗ ಅವರೊಡನೆ ಹೀಗೆ ಹೇಳಲಾಗುತ್ತದೆ: "ತಾವು ಇಹಲೋಕಕ್ಕೆ ವಿದಾಯ ಕೋರಿದ ನಂತರ ಅವರು ಏನು ಮಾಡಿದರೆಂದು ನಿಮಗೆ ಗೊತ್ತಿದೆಯೇ? ಅಲ್ಲಾಹನಾಣೆ! ಅವರು ತಮ್ಮ ಹಿಮ್ಮಡಿಗಳಲ್ಲಿ ಮರಳಿ ಧರ್ಮದಿಂದ ಹಿಂದೆ ಸರಿದರು. ಆದ್ದರಿಂದ ಅವರು ನಿಮ್ಮವರಲ್ಲ ಮತ್ತು ನಿಮ್ಮ ಸಮುದಾಯದವರೂ ಅಲ್ಲ."

فوائد الحديث

ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಮುದಾಯದ ಮೇಲಿರುವ ದಯೆ ಹಾಗೂ ಆಸಕ್ತಿಯನ್ನು ಈ ಹದೀಸ್ ತಿಳಿಸುತ್ತದೆ.

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾರ್ಗಕ್ಕೆ ವಿರುದ್ಧವಾಗಿ ಸಾಗುವುದು ಅಪಾಯಕಾರಿಯೆಂದು ಈ ಹದೀಸ್ ತಿಳಿಸುತ್ತದೆ.

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸುನ್ನತ್ತನ್ನು (ಚರ್ಯೆಯನ್ನು) ಬಿಗಿಯಾಗಿ ಹಿಡಿದುಕೊಳ್ಳಬೇಕೆಂದು ಈ ಹದೀಸ್ ಒತ್ತಾಯಿಸುತ್ತದೆ.

التصنيفات

ಅಂತ್ಯದಿನದಲ್ಲಿ ವಿಶ್ವಾಸವಿಡುವುದು, The Hereafter Life, Branches of Faith