ಓ ಬಿಲಾಲ್! ನಮಾಝ್‌ಗಾಗಿ ಇಕಾಮತ್ ನೀಡು ಮತ್ತು ಅದರ ಮೂಲಕ ನಮ್ಮನ್ನು ನಿರಾಳಗೊಳಿಸು

ಓ ಬಿಲಾಲ್! ನಮಾಝ್‌ಗಾಗಿ ಇಕಾಮತ್ ನೀಡು ಮತ್ತು ಅದರ ಮೂಲಕ ನಮ್ಮನ್ನು ನಿರಾಳಗೊಳಿಸು

ಸಾಲಿಮ್ ಬಿನ್ ಅಬುಲ್-ಜಅದ್ ರಿಂದ ವರದಿ. ಅವರು ಹೇಳಿದರು: ಒಬ್ಬ ವ್ಯಕ್ತಿ ಹೇಳಿದರು: "ನಾನು ನಮಾಝ್ ನಿರ್ವಹಿಸಿ ನಿರಾಳನಾಗುತ್ತಿದ್ದರೆ ಎಷ್ಟು ಚೆನ್ನಾಗಿತ್ತು!" ಆಗ ಜನರು ಅವನನ್ನು ತರಾಟೆಗೆ ಎತ್ತಿಕೊಂಡರೆಂದು ತೋರುತ್ತದೆ. ಆಗ ಆ ವ್ಯಕ್ತಿ ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಓ ಬಿಲಾಲ್! ನಮಾಝ್‌ಗಾಗಿ ಇಕಾಮತ್ ನೀಡು ಮತ್ತು ಅದರ ಮೂಲಕ ನಮ್ಮನ್ನು ನಿರಾಳಗೊಳಿಸು."

[صحيح] [رواه أبو داود]

الشرح

ಸಹಾಬಿಗಳಲ್ಲಿ ಸೇರಿದ ಒಬ್ಬ ವ್ಯಕ್ತಿ ಹೇಳಿದರು: "ನಾನು ನಮಾಝ್ ನಿರ್ವಹಿಸಿ ನಿರಾಳನಾಗುತ್ತಿದ್ದರೆ ಎಷ್ಟು ಚೆನ್ನಾಗಿತ್ತು!" ಆಗ ಅವರ ಸುತ್ತಲಿದ್ದ ಜನರು ಅವರನ್ನು ತರಾಟೆಗೆ ಎತ್ತಿಕೊಂಡರೆಂದು ತೋರುತ್ತದೆ. ಆಗ ಆ ವ್ಯಕ್ತಿ ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: ಓ ಬಿಲಾಲ್! ನಮಾಝ್‌ಗೆ ಅಝಾನ್ ಮತ್ತು ಇಕಾಮತ್ ನೀಡು. ನಾವು ನಮಾಝ್ ನಿರ್ವಹಿಸಿ ನಿರಾಳರಾಗುತ್ತೇವೆ. ಏಕೆಂದರೆ ನಮಾಝ್‌ನಲ್ಲಿ ಅಲ್ಲಾಹನೊಂದಿಗೆ ಗುಪ್ತ ಸಂಭಾಷಣೆಯಿದೆ ಮತ್ತು ಅದರಿಂದ ಆತ್ಮ ಹಾಗೂ ಹೃದಯಕ್ಕೆ ನಿರಾಳತೆ ಉಂಟಾಗುತ್ತದೆ.

فوائد الحديث

ನಮಾಝ್‌ನಿಂದ ಹೃದಯಕ್ಕೆ ನಿರಾಳತೆ ದೊರಕುತ್ತದೆ. ಏಕೆಂದರೆ ಅದರಲ್ಲಿ ಅಲ್ಲಾಹನೊಂದಿಗೆ ಗುಪ್ತ ಸಂಭಾಷಣೆ ನಡೆಸಲಾಗುತ್ತದೆ.

ಆರಾಧನೆಗಳನ್ನು ಭಾರವಾಗಿ ಕಾಣುವವರಿಗೆ ಇದರಲ್ಲಿ ಅಸಮ್ಮತಿಯನ್ನು ಸೂಚಿಸಲಾಗಿದೆ.

ಒಬ್ಬರು ತನ್ನ ಕಡ್ಡಾಯ ಕರ್ತವ್ಯವನ್ನು ನಿರ್ವಹಿಸಿ ಹೊಣೆಯಿಂದ ಮುಕ್ತರಾಗುವಾಗ ಅವರಿಗೆ ನಿರಾಳತೆ ಮತ್ತು ಮನಶ್ಶಾಂತಿ ಲಭ್ಯವಾಗುತ್ತದೆ.

التصنيفات

Virtue of Prayer, The Azan and Iqaamah