ಕಪಟ ವಿಶ್ವಾಸಿಯ ಉದಾಹರಣೆಯು ಎರಡು ಕುರಿಮಂದೆಯ ನಡುವೆಯಿರುವ ಒಂದು ಕುರಿಯಂತಿದೆ. ಅದು ಒಮ್ಮೆ ಈ ಮಂದೆಗೂ ಇನ್ನೊಮ್ಮೆ ಈ ಮಂದೆಗೂ…

ಕಪಟ ವಿಶ್ವಾಸಿಯ ಉದಾಹರಣೆಯು ಎರಡು ಕುರಿಮಂದೆಯ ನಡುವೆಯಿರುವ ಒಂದು ಕುರಿಯಂತಿದೆ. ಅದು ಒಮ್ಮೆ ಈ ಮಂದೆಗೂ ಇನ್ನೊಮ್ಮೆ ಈ ಮಂದೆಗೂ ಚಲಿಸುತ್ತದೆ

ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕಪಟ ವಿಶ್ವಾಸಿಯ ಉದಾಹರಣೆಯು ಎರಡು ಕುರಿಮಂದೆಯ ನಡುವೆಯಿರುವ ಒಂದು ಕುರಿಯಂತಿದೆ. ಅದು ಒಮ್ಮೆ ಈ ಮಂದೆಗೂ ಇನ್ನೊಮ್ಮೆ ಈ ಮಂದೆಗೂ ಚಲಿಸುತ್ತದೆ."

[صحيح] [رواه مسلم]

الشرح

ಈ ಹದೀಸಿನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಪಟ ವಿಶ್ವಾಸಿಯ ಬಗ್ಗೆ ವಿವರಿಸುತ್ತಾರೆ. ಅಂದರೆ, ಅವರ ಉದಾಹರಣೆಯು ಎರಡು ಕುರಿಮಂದೆಗಳಲ್ಲಿ ಯಾವುದನ್ನು ಹಿಂಬಾಲಿಸಬೇಕು ಎಂಬುದನ್ನು ತಿಳಿಯದೆ ಅತಂತ್ರ ಸ್ಥಿತಿಯಲ್ಲಿರುವ ಒಂದು ಕುರಿಯಂತಿದೆ ಅದು ಒಮ್ಮೆ ಈ ಮಂದೆಗೂ ಇನ್ನೊಮ್ಮೆ ಆ ಮಂದೆಗೂ ಹೋಗುತ್ತದೆ. ಅವರು ಸತ್ಯವಿಶ್ವಾಸ ಮತ್ತು ಸತ್ಯನಿಷೇಧದ ನಡುವೆ ಗಲಿಬಿಲಿಯಲ್ಲಿರುತ್ತಾರೆ. ಅವರು ಬಾಹ್ಯವಾಗಿ ಮತ್ತು ಆಂತರಿಕವಾಗಿ ಸತ್ಯವಿಶ್ವಾಸಿಗಳೊಂದಿಗೂ ಇರುವುದಿಲ್ಲ ಮತ್ತು ಸತ್ಯನಿಷೇಧಿಗಳೊಂದಿಗೂ ಇರುವುದಿಲ್ಲ. ಬದಲಿಗೆ ಅವರು ಬಾಹ್ಯವಾಗಿ ಸತ್ಯ ವಿಶ್ವಾಸಿಗಳೊಂದಿಗೆ ಇದ್ದರೂ ಅವರ ಆಂತರ್ಯವು ಸಂಶಯ ಮತ್ತು ಹಿಂಜರಿಕೆಯಲ್ಲಿರುತ್ತದೆ. ಅವರು ಕೆಲವೊಮ್ಮೆ ಅವರೊಡನೆ ಸೇರಿದರೆ, ಕೆಲವೊಮ್ಮೆ ಇವರೊಡನೆ ಸೇರುತ್ತಾರೆ.

فوائد الحديث

ವಿಷಯವನ್ನು ಮನದಟ್ಟು ಮಾಡಲು ಉದಾಹರಣೆಗಳನ್ನು ತಿಳಿಸುವುದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಚರ್ಯೆಯಾಗಿದೆ.

ಕಪಟವಿಶ್ವಾಸಿಗಳಲ್ಲಿರುವ ಹಿಂಜರಿಕೆ, ಸಂಶಯ ಮತ್ತು ಅಭದ್ರತಾ ಮನೋಭಾವವನ್ನು ಈ ಹದೀಸ್ ವಿವರಿಸುತ್ತದೆ.

ಕಪಟ ವಿಶ್ವಾಸಿಗಳ ಅವಸ್ಥೆಯ ಬಗ್ಗೆ ಈ ಹದೀಸ್ ಎಚ್ಚರಿಕೆ ನೀಡುತ್ತದೆ ಮತ್ತು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಸತ್ಯವಿಶ್ವಾಸದಲ್ಲಿ ದೃಢವಾಗಿ ನಿಲ್ಲಲು ಪ್ರೋತ್ಸಾಹಿಸುತ್ತದೆ.

التصنيفات

Hypocrisy