ನಾವು ಹೇಳಿದೆವು: "ನೀವು ನಮ್ಮ ಯಜಮಾನರು." ಆಗ ಅವರು ಹೇಳಿದರು: "ಯಜಮಾನ ಅಲ್ಲಾಹನಾಗಿದ್ದಾನೆ." ನಾವು ಹೇಳಿದೆವು: "ನೀವು ಶ್ರೇಷ್ಠತೆಯಲ್ಲಿ…

ನಾವು ಹೇಳಿದೆವು: "ನೀವು ನಮ್ಮ ಯಜಮಾನರು." ಆಗ ಅವರು ಹೇಳಿದರು: "ಯಜಮಾನ ಅಲ್ಲಾಹನಾಗಿದ್ದಾನೆ." ನಾವು ಹೇಳಿದೆವು: "ನೀವು ಶ್ರೇಷ್ಠತೆಯಲ್ಲಿ ನಮ್ಮ ಪೈಕಿ ಅತ್ಯುತ್ತಮರು ಮತ್ತು ನೀಳದಲ್ಲಿ (ಗೌರವದಲ್ಲಿ) ನಮ್ಮ ಪೈಕಿ ಅತಿಶ್ರೇಷ್ಠರು." ಅವರು ಹೇಳಿದರು: "ನಿಮಗೆ ಹೇಳಲಿರುವುದನ್ನು ಅಥವಾ ನಿಮಗೆ ಹೇಳಲಿರುವ ಕೆಲವನ್ನು ಹೇಳಿರಿ. ಆದರೆ ಶೈತಾನನು ನಿಮ್ಮನ್ನು ಎಳೆದೊಯ್ಯಲು ಬಿಡಬೇಡಿ

ಅಬ್ದುಲ್ಲಾ ಬಿನ್ ಶಿಖ್ಖೀರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಬನೂ ಆಮಿರ್ ನಿಯೋಗದೊಂದಿಗೆ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಹೊರಟೆ. ನಾವು ಹೇಳಿದೆವು: "ನೀವು ನಮ್ಮ ಯಜಮಾನರು." ಆಗ ಅವರು ಹೇಳಿದರು: "ಯಜಮಾನ ಅಲ್ಲಾಹನಾಗಿದ್ದಾನೆ." ನಾವು ಹೇಳಿದೆವು: "ನೀವು ಶ್ರೇಷ್ಠತೆಯಲ್ಲಿ ನಮ್ಮ ಪೈಕಿ ಅತ್ಯುತ್ತಮರು ಮತ್ತು ನೀಳದಲ್ಲಿ (ಗೌರವದಲ್ಲಿ) ನಮ್ಮ ಪೈಕಿ ಅತಿಶ್ರೇಷ್ಠರು." ಅವರು ಹೇಳಿದರು: "ನಿಮಗೆ ಹೇಳಲಿರುವುದನ್ನು ಅಥವಾ ನಿಮಗೆ ಹೇಳಲಿರುವ ಕೆಲವನ್ನು ಹೇಳಿರಿ. ಆದರೆ ಶೈತಾನನು ನಿಮ್ಮನ್ನು ಎಳೆದೊಯ್ಯಲು ಬಿಡಬೇಡಿ."

[صحيح] [رواه أبو داود وأحمد]

الشرح

ಒಂದು ಗುಂಪು ಜನರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದರು. ಅವರು ಬಂದು ತಲುಪಿದಾಗ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಷ್ಟವಿಲ್ಲದ ಕೆಲವು ಪದಗಳ ಮೂಲಕ ಅವರನ್ನು ಪ್ರಶಂಸಿಸ ತೊಡಗಿದರು. ಅವರು ಹೇಳಿದರು: "ನೀವು ನಮ್ಮ ಯಜಮಾನರು." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಜಮಾನ ಅಲ್ಲಾಹನಾಗಿದ್ದಾನೆ." ಏಕೆಂದರೆ, ಅವನಿಗೆ ಅವನ ಸೃಷ್ಟಿಗಳ ಮೇಲೆ ಸಂಪೂರ್ಣ ಯಜಮಾನತ್ವವಿದೆ ಮತ್ತು ಅವರು ಅವನ ದಾಸರಾಗಿದ್ದಾರೆ. ಅವರು ಹೇಳಿದರು: "ನೀವು ಶ್ರೇಷ್ಠತೆಯಲ್ಲಿ ನಮ್ಮ ಪೈಕಿ ಅತ್ಯುತ್ತಮರು." ಅಂದರೆ ಪದವಿ, ಘನತೆ ಮತ್ತು ವೈಶಿಷ್ಟ್ಯದಲ್ಲಿ ನಮಗಿಂತ ಮೇಲಿರುವವರು. "ನೀವು ನೀಳದಲ್ಲಿ ನಮ್ಮ ಪೈಕಿ ಅತಿಶ್ರೇಷ್ಠರು." ಅಂದರೆ ನೀವು ಕೊಡುವುದರಲ್ಲಿ, ಔನ್ನತ್ಯದಲ್ಲಿ ಮತ್ತು ಸ್ಥಾನಮಾನದಲ್ಲಿ ನಮ್ಮಲ್ಲಿ ಅತಿಹೆಚ್ಚಿನವರು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ, ಅವರು ಸಾಮಾನ್ಯವಾಗಿ ಹೇಳುವ ಮಾತುಗಳನ್ನು ಹೇಳಲು ಮತ್ತು ಉತ್ಪ್ರೇಕ್ಷೆಯ ಶಬ್ದಗಳನ್ನು ಬಳಸದಿರಲು ನಿರ್ದೇಶಿಸಿದರು. ಇದು ಶೈತಾನನು ಅವರನ್ನು ಅತಿರೇಕಕ್ಕೆ ಮತ್ತು ಮಿತಿಮೀರಿದ ಪ್ರಶಂಸೆಗೆ ಎಳೆದೊಯ್ದು ನಿಷೇಧಿಸಲಾದ ಶಿರ್ಕ್ (ದೇವ ಸಹಭಾಗಿತ್ವ) ಮತ್ತು ಅದರ ಕಡೆಗೆ ಒಯ್ಯುವ ದಾರಿಗಳಲ್ಲಿ ಬೀಳಿಸದಿರಲೆಂದಾಗಿದೆ.

فوائد الحديث

ಸಹಾಬಿಗಳ ದೃಷ್ಟಿಯಲ್ಲಿ ಪ್ರವಾದಿಯವರಿಗಿದ್ದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಹಾ ಘನತೆ ಮತ್ತು ಗೌರವವನ್ನು ತಿಳಿಸಲಾಗಿದೆ.

ಅತಿರೇಕದ ಪದಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ ಮತ್ತು ಮಾತಿನಲ್ಲಿ ಮಿತತ್ವ ಪಾಲಿಸಲು ಆಜ್ಞಾಪಿಸಲಾಗಿದೆ.

ಕೆಲವು ಮಾತು ಮತ್ತು ಕ್ರಿಯೆಗಳಿಂದ ಉಂಟಾಗಬಹುದಾದ ಒಡಕುಗಳಿಂದ ತೌಹೀದನ್ನು ಸಂರಕ್ಷಿಸಲಾಗಿದೆ.

ಪ್ರಶಂಸೆಯಲ್ಲಿ ಮಿತಿಮೀರುವುದನ್ನು ನಿಷೇಧಿಸಲಾಗಿದೆ. ಏಕೆಂದರೆ ಅದು ಶೈತಾನನ ಪ್ರವೇಶ ದ್ವಾರಗಳಲ್ಲಿ ಒಂದಾಗಿದೆ.

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆದಂ ಸಂತತಿಗಳ ನೇತಾರರಾಗಿದ್ದಾರೆ. ಹದೀಸಿನಲ್ಲಿ ಹೀಗೆ ಹೇಳಲಾಗಿರುವುದು ಅವರ ವಿನಯದಿಂದ ಮತ್ತು ಜನರು ಅವರ ವಿಷಯದಲ್ಲಿ ಮಿತಿಮೀರುವರು ಎಂಬ ಭಯದಿಂದಾಗಿದೆ.

التصنيفات

Our Prophet Muhammad, may Allah's peace and blessings be upon him