ಯಾರು ಅಸರ್ ನಮಾಝನ್ನು ತೊರೆಯುತ್ತಾರೋ ಅವರ ಕರ್ಮಗಳು ನಿಷ್ಪಲವಾಗುತ್ತವೆ

ಯಾರು ಅಸರ್ ನಮಾಝನ್ನು ತೊರೆಯುತ್ತಾರೋ ಅವರ ಕರ್ಮಗಳು ನಿಷ್ಪಲವಾಗುತ್ತವೆ

ಬುರೈದ ಬಿನ್ ಹಸೀಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: "ಅಸರ್ ನಮಾಜನ್ನು ಬೇಗನೆ ನಿರ್ವಹಿಸಿರಿ. ಏಕೆಂದರೆ ಪ್ರವಾದಿಯವರು ಹೇಳಿದರು: "ಯಾರು ಅಸರ್ ನಮಾಝನ್ನು ತೊರೆಯುತ್ತಾರೋ ಅವರ ಕರ್ಮಗಳು ನಿಷ್ಪಲವಾಗುತ್ತವೆ."

[Sahih/Authentic.] [Al-Bukhari]

الشرح

ಅಸರ್ ನಮಾಝನ್ನು ಉದ್ದೇಶಪೂರ್ವಕವಾಗಿ ಅದರ ಸಮಯಕ್ಕಿಂತ ವಿಳಂಬಗೊಳಿಸುವುದರ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಚ್ಚರಿಕೆ ನೀಡುತ್ತಿದ್ದಾರೆ. ಹೀಗೆ ಮಾಡುವವನ ಕರ್ಮಗಳು ನಿಷ್ಪಲವಾಗುತ್ತವೆ ಮತ್ತು ನಿರರ್ಥಕವಾಗುತ್ತವೆ.

فوائد الحديث

ಅಸರ್ ನಮಾಝನ್ನು ಅದರ ಆರಂಭ ಸಮಯದಲ್ಲಿ ನಿರ್ವಹಿಸಲು ಮತ್ತು ಅದಕ್ಕಾಗಿ ಆತುರಪಡಲು ಈ ಹದೀಸ್ ಪ್ರೋತ್ಸಾಹಿಸುತ್ತದೆ.

ಅಸರ್ ನಮಾಝನ್ನು ತೊರೆಯುವವರಿಗೆ ಈ ಹದೀಸಿನಲ್ಲಿ ಕಠೋರ ಎಚ್ಚರಿಕೆಯನ್ನು ನೀಡಲಾಗಿದೆ. ಅದನ್ನು ಅದರ ಸಮಯದಿಂದ ತಪ್ಪಿಸುವುದು ಇತರ ನಮಾಝ್‌ಗಳನ್ನು ಅವುಗಳ ಸಮಯದಿಂದ ತಪ್ಪಿಸುವುದಕ್ಕಿಂತಲೂ ದೊಡ್ಡ ಅಪರಾಧವಾಗಿದೆ. ಏಕೆಂದರೆ ಅದು ಮಧ್ಯಮ ನಮಾಝ್ ಆಗಿದ್ದು ಅಲ್ಲಾಹು ತನ್ನ ಆಜ್ಞೆಯ ಮೂಲಕ ಅದಕ್ಕೆ ವಿಶೇಷತೆ ನೀಡಿದ್ದಾನೆ: "ನೀವು ನಮಾಝ್‌ಗಳನ್ನು ಸಂರಕ್ಷಿಸಿರಿ; ವಿಶೇಷವಾಗಿ ಮಧ್ಯಮ ನಮಾಝನ್ನು." [ಬಕರ:238].