ಕಳ್ಳತನ ಮಾಡುವವರಲ್ಲಿ ಅತಿಕೆಟ್ಟವರು ನಮಾಝ್‌ನಲ್ಲಿ ಕಳ್ಳತನ ಮಾಡುವವರು." ಸಹಾಬಿಗಳು ಕೇಳಿದರು: "ನಮಾಝ್‌ನಲ್ಲಿ ಕಳ್ಳತನ ಮಾಡುವುದು…

ಕಳ್ಳತನ ಮಾಡುವವರಲ್ಲಿ ಅತಿಕೆಟ್ಟವರು ನಮಾಝ್‌ನಲ್ಲಿ ಕಳ್ಳತನ ಮಾಡುವವರು." ಸಹಾಬಿಗಳು ಕೇಳಿದರು: "ನಮಾಝ್‌ನಲ್ಲಿ ಕಳ್ಳತನ ಮಾಡುವುದು ಹೇಗೆ?" ಅವರು ಉತ್ತರಿಸಿದರು: "ಅದರ ರುಕೂ ಮತ್ತು ಸುಜೂದ್‌ಗಳನ್ನು ಪೂರ್ಣಗೊಳಿಸದಿರುವುದು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕಳ್ಳತನ ಮಾಡುವವರಲ್ಲಿ ಅತಿಕೆಟ್ಟವರು ನಮಾಝ್‌ನಲ್ಲಿ ಕಳ್ಳತನ ಮಾಡುವವರು." ಸಹಾಬಿಗಳು ಕೇಳಿದರು: "ನಮಾಝ್‌ನಲ್ಲಿ ಕಳ್ಳತನ ಮಾಡುವುದು ಹೇಗೆ?" ಅವರು ಉತ್ತರಿಸಿದರು: "ಅದರ ರುಕೂ ಮತ್ತು ಸುಜೂದ್‌ಗಳನ್ನು ಪೂರ್ಣಗೊಳಿಸದಿರುವುದು."

[صحيح] [رواه ابن حبان]

الشرح

ಕಳ್ಳತನ ಮಾಡುವವರಲ್ಲಿ ಅತಿಕೆಟ್ಟ ವ್ಯಕ್ತಿ ನಮಾಝ್‌ನಲ್ಲಿ ಕಳ್ಳತನ ಮಾಡುವವನೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸಿದ್ದಾರೆ. ಅದೇಕೆಂದರೆ, ಇತರರ ಹಣವನ್ನು ಕದ್ದವನು ಇಹಲೋಕದಲ್ಲಿ ಅದರ ಪ್ರಯೋಜನ ಪಡೆಯುತ್ತಾನೆ. ಆದರೆ ಈ ಕಳ್ಳ ಸ್ವತಃ ತನ್ನದೇ ಪ್ರತಿಫಲವನ್ನು ಕದಿಯುತ್ತಿದ್ದಾನೆ. ಸಹಾಬಿಗಳು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಮಾಝ್‌ನಿಂದ ಕದಿಯುವುದು ಹೇಗೆ?" ಅವರು ಉತ್ತರಿಸಿದರು: "ಅದರ ರುಕೂ ಮತ್ತು ಸುಜೂದ್‌ಗಳನ್ನು ಪೂರ್ಣಗೊಳಿಸದಿರುವುದು." ಅಂದರೆ ರುಕೂ ಮತ್ತು ಸುಜೂದ್‌ಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದೆ ಆತುರದಿಂದ ನಿರ್ವಹಿಸುವುದು.

فوائد الحديث

ನಮಾಝಿನ ವಿಷಯದಲ್ಲಿ ಸೂಕ್ಷ್ಮತೆ ಪಾಲಿಸುವುದು ಮತ್ತು ಅದರ ಕಡ್ಡಾಯ ಕ್ರಿಯೆಗಳನ್ನು ಶಾಂತವಾಗಿ ಮತ್ತು ವಿನಮ್ರವಾಗಿ ನಿರ್ವಹಿಸುವುದಕ್ಕೆ ಪ್ರಾಮುಖ್ಯತೆ ನೀಡಲಾಗಿದೆ.

ರುಕೂ ಮತ್ತು ಸುಜೂದ್‌ಗಳನ್ನು ಪೂರ್ತಿ ಮಾಡದವರನ್ನು ಕಳ್ಳರು ಎಂದು ಕರೆಯಲಾಗಿದೆ. ಇದು ಅದರ ಬಗ್ಗೆ ಅವರಿಗೆ ಹೆದರಿಸಲು ಮತ್ತು ಹೀಗೆ ಮಾಡುವುದು ನಿಷಿದ್ಧವೆಂದು ಸೂಚಿಸುವುದಕ್ಕಾಗಿದೆ.

ನಮಾಝ್‌ನಲ್ಲಿ ರುಕೂ ಮತ್ತು ಸುಜೂದ್‌ಗಳನ್ನು ಪೂರ್ಣಗೊಳಿಸುವುದು ಮತ್ತು ಶಾಂತವಾಗಿ ನಿರ್ವಹಿಸುವುದು ಕಡ್ಡಾಯವಾಗಿದೆ.

التصنيفات

Pillars of Prayer, Method of Prayer, Mistakes during Prayer