“ಸಂಬಂಧಿಕರು ಸಂಬಂಧ ಜೋಡಿಸಿದರೆ ಮಾತ್ರ ಸಂಬಂಧ ಜೋಡಿಸುವವನು ಕುಟುಂಬ ಸಂಬಂಧವನ್ನು ಕಾಪಾಡುವವನಲ್ಲ. ಬದಲಿಗೆ, ಸಂಬಂಧಿಕರು…

“ಸಂಬಂಧಿಕರು ಸಂಬಂಧ ಜೋಡಿಸಿದರೆ ಮಾತ್ರ ಸಂಬಂಧ ಜೋಡಿಸುವವನು ಕುಟುಂಬ ಸಂಬಂಧವನ್ನು ಕಾಪಾಡುವವನಲ್ಲ. ಬದಲಿಗೆ, ಸಂಬಂಧಿಕರು ಸಂಬಂಧವನ್ನು ಕಡಿದಾಗ ಅವರೊಡನೆ ಸಂಬಂಧ ಜೋಡಿಸುವವನೇ ಕುಟುಂಬ ಸಂಬಂಧವನ್ನು ಕಾಪಾಡುವವನು.”

ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಸಂಬಂಧಿಕರು ಸಂಬಂಧ ಜೋಡಿಸಿದರೆ ಮಾತ್ರ ಸಂಬಂಧ ಜೋಡಿಸುವವನು ಕುಟುಂಬ ಸಂಬಂಧವನ್ನು ಕಾಪಾಡುವವನಲ್ಲ. ಬದಲಿಗೆ, ಸಂಬಂಧಿಕರು ಸಂಬಂಧವನ್ನು ಕಡಿದಾಗ ಅವರೊಡನೆ ಸಂಬಂಧ ಜೋಡಿಸುವವನೇ ಕುಟುಂಬ ಸಂಬಂಧವನ್ನು ಕಾಪಾಡುವವನು.”

[صحيح] [رواه البخاري]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ: ಸಂಬಂಧಿಕರು ಒಳಿತು ಮಾಡಿದರೆ ಮಾತ್ರ ಒಳಿತು ಮಾಡುವವನು, ಪೂರ್ಣ ರೂಪದಲ್ಲಿ ಕುಟುಂಬ ಸಂಬಂಧವನ್ನು ಜೋಡಿಸುವವನಲ್ಲ ಮತ್ತು ಸಂಬಂಧಿಕರಿಗೆ ಒಳಿತು ಮಾಡುವವನಲ್ಲ. ಬದಲಿಗೆ, ನಿಜವಾದ ಮತ್ತು ಪೂರ್ಣ ರೂಪದಲ್ಲಿ ಸಂಬಂಧ ಜೋಡಿಸುವವನು ಯಾರೆಂದರೆ, ಸಂಬಂಧಿಕನು ಸಂಬಂಧ ಕಡಿದರೂ ಅವನೊಂದಿಗೆ ಸಂಬಂಧ ಜೋಡಿಸುವವನು ಮತ್ತು ಸಂಬಂಧಿಕರು ಕೆಟ್ಟದಾಗಿ ವರ್ತಿಸಿದರೂ ಅವರೊಡನೆ ಉತ್ತಮವಾಗಿ ವರ್ತಿಸುವವನಾಗಿದ್ದಾನೆ.

فوائد الحديث

ಧಾರ್ಮಿಕ ಪರಿಗಣನೆಯಲ್ಲಿ ಕುಟುಂಬ ಸಂಬಂಧ ಜೋಡಿಸುವುದು ಎಂದರೆ ಸಂಬಂಧ ಕಡಿದವರೊಡನೆ ಸಂಬಂಧ ಜೋಡಿಸುವುದು, ಸಂಬಂಧಿಕರು ಅನ್ಯಾಯವೆಸಗಿದರೆ ಅವರಿಗೆ ಕ್ಷಮಿಸುವುದು ಮತ್ತು ಅವರು ನಿಮಗೆ ಏನೂ ಕೊಡದಿದ್ದರೂ ನೀವು ಅವರಿಗೆ ಕೊಡುವುದು. ಇದರ ಹೊರತು ಅವರು ಒಳಿತು ಮಾಡಿದರೆ ಮಾತ್ರ ಒಳಿತು ಮಾಡುವುದು ಕುಟುಂಬ ಸಂಬಂಧ ಜೋಡಣೆಯಲ್ಲ.

ಸಾಧ್ಯವಾಗುವ ಎಲ್ಲಾ ಒಳಿತುಗಳನ್ನು ಮಾಡುವ ಮೂಲಕ ಕುಟುಂಬ ಸಂಬಂಧವನ್ನು ಜೋಡಿಸಬಹುದು. ಉದಾಹರಣೆಗೆ, ಹಣ ನೀಡುವುದು, ಪ್ರಾರ್ಥಿಸುವುದು, ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ವಿರೋಧಿಸುವುದು, ಹಾಗೆಯೇ ಅವರಿಗೆ ಉಂಟಾಗಬಹುದಾದ ಹಾನಿಯನ್ನು ತಡೆಗಟ್ಟುವುದು ಇತ್ಯಾದಿ.

التصنيفات

Muslim Society