ಸುಳ್ಳು ಎಂದು ಭಾವಿಸಲಾಗುವ ಒಂದು ಹದೀಸನ್ನು ಯಾರಾದರೂ ನನ್ನ ಹೆಸರಲ್ಲಿ ವರದಿ ಮಾಡಿದರೆ, ಅವನು ಸುಳ್ಳುಗಾರರಲ್ಲಿ ಒಬ್ಬನಾಗಿದ್ದಾನೆ

ಸುಳ್ಳು ಎಂದು ಭಾವಿಸಲಾಗುವ ಒಂದು ಹದೀಸನ್ನು ಯಾರಾದರೂ ನನ್ನ ಹೆಸರಲ್ಲಿ ವರದಿ ಮಾಡಿದರೆ, ಅವನು ಸುಳ್ಳುಗಾರರಲ್ಲಿ ಒಬ್ಬನಾಗಿದ್ದಾನೆ

ಸಮುರ ಬಿನ್ ಜುಂದುಬ್ ಮತ್ತು ಮುಗೀರ ಬಿನ್ ಶುಅ್‌ಬ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರಿಬ್ಬರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸುಳ್ಳು ಎಂದು ಭಾವಿಸಲಾಗುವ ಒಂದು ಹದೀಸನ್ನು ಯಾರಾದರೂ ನನ್ನ ಹೆಸರಲ್ಲಿ ವರದಿ ಮಾಡಿದರೆ, ಅವನು ಸುಳ್ಳುಗಾರರಲ್ಲಿ ಒಬ್ಬನಾಗಿದ್ದಾನೆ."

[صحيح]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರಾದರೂ ಸುಳ್ಳು ಎಂದು ತಿಳಿದಿರುವ, ಅಥವಾ ಸುಳ್ಳು ಎಂದು ಭಾವಿಸುವ, ಅಥವಾ ಸುಳ್ಳು ಎಂದು ಖಾತ್ರಿಯಿರುವ ಒಂದು ಹದೀಸನ್ನು ಅವರ ಹೆಸರಲ್ಲಿ ವರದಿ ಮಾಡಿದರೆ, ಅದನ್ನು ಮೊದಲು ವರದಿ ಮಾಡಿದವನ ಸುಳ್ಳುಗಾರಿಕೆಯಲ್ಲಿ ಇವನೂ ಭಾಗಿಯಾಗುತ್ತಾನೆ.

فوائد الحديث

ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವರದಿ ಮಾಡಲಾಗುವ ಹದೀಸ್‌ಗಳ ಬಗ್ಗೆ ಪರಿಶೋಧನೆ ನಡೆಸಬೇಕು ಮತ್ತು ಅದನ್ನು ಇತರರಿಗೆ ವರದಿ ಮಾಡುವ ಮೊದಲು ಅದರ ಅಧಿಕೃತತೆಯನ್ನು ಖಚಿತಪಡಿಸಿಕೊಳ್ಳಬೇಕೆಂದು ತಿಳಿಸಲಾಗಿದೆ.

ಸುಳ್ಳು ಸೃಷ್ಟಿಸಿದವರು, ಅದನ್ನು ಸಾಗಿಸುವ ಕೆಲಸ ಮಾಡಿದವರು ಮತ್ತು ಅದನ್ನು ಜನರ ಮಧ್ಯೆ ಪ್ರಚಾರ ಮಾಡಿದವರು ಎಲ್ಲರೂ ಸುಳ್ಳುಗಾರರು ಎಂಬ ಅಪಕೀರ್ತಿಗೆ ಪಾತ್ರರಾಗುತ್ತಾರೆ.

ಒಂದು ಹದೀಸ್ ಕೃತಕವೆಂದು ತಿಳಿದಿದ್ದರೆ, ಅಥವಾ ಅದು ಕೃತಕವೆಂದು ಖಾತ್ರಿಯಾದರೆ, ಅದನ್ನು ವರದಿ ಮಾಡುವುದು ನಿಷಿದ್ಧವಾಗಿದೆ. ಆದರೆ, ಅದರ ಬಗ್ಗೆ ಜನರಿಗೆ ಎಚ್ಚರಿಕೆ ನೀಡುವುದಕ್ಕಾಗಿದ್ದರೆ ಪರವಾಗಿಲ್ಲ.

التصنيفات

Significance and Status of the Sunnah, Blameworthy Morals