“ನರಕವನ್ನು ಮೋಹಗಳಿಂದ ಮರೆಮಾಡಲಾಗಿದೆ ಮತ್ತು ಸ್ವರ್ಗವನ್ನು ಸಂಕಷ್ಟಗಳಿಂದ ಮರೆಮಾಡಲಾಗಿದೆ.”

“ನರಕವನ್ನು ಮೋಹಗಳಿಂದ ಮರೆಮಾಡಲಾಗಿದೆ ಮತ್ತು ಸ್ವರ್ಗವನ್ನು ಸಂಕಷ್ಟಗಳಿಂದ ಮರೆಮಾಡಲಾಗಿದೆ.”

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ನರಕವನ್ನು ಮೋಹಗಳಿಂದ ಮರೆಮಾಡಲಾಗಿದೆ ಮತ್ತು ಸ್ವರ್ಗವನ್ನು ಸಂಕಷ್ಟಗಳಿಂದ ಮರೆಮಾಡಲಾಗಿದೆ.”

[صحيح] [رواه البخاري]

الشرح

ಮನಸ್ಸು ಮೋಹಿಸುವ ಕಾರ್ಯಗಳಿಂದ, ಅಂದರೆ ನಿಷೇಧಿಸಲಾದ ಕೃತ್ಯಗಳನ್ನು ಮಾಡುವುದು, ಕಡ್ಡಾಯ ಕರ್ಮಗಳನ್ನು ಸರಿಯಾಗಿ ನಿರ್ವಹಿಸುತ್ತಿರುವುದು ಮುಂತಾದವುಗಳಿಂದ ಸ್ವರ್ಗವನ್ನು ಮುಚ್ಚಲಾಗಿದೆ ಮತ್ತು ಸುತ್ತುವರಿಯಲಾಗಿದೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ವಿವರಿಸುತ್ತಾರೆ. ಯಾರ ಮನಸ್ಸು ಈ ವಿಷಯಗಳಲ್ಲಿ ಅವನ ಮೋಹಗಳನ್ನು ಹಿಂಬಾಲಿಸುತ್ತದೋ ಅವನು ನರಕಕ್ಕೆ ಅರ್ಹನಾಗಿದ್ದಾನೆ. ಕಡ್ಡಾಯ ಕರ್ಮಗಳನ್ನು ಸರಿಯಾಗಿ ನಿರ್ವಹಿಸುವುದು, ನಿಷೇಧಿಸಲಾದ ಕೃತ್ಯಗಳನ್ನು ತೊರೆಯುವುದು ಮತ್ತು ಅದಕ್ಕಾಗಿ ಸಹನೆಯಿಂದ ಇರುವುದು ಮುಂತಾದ ಮನಸ್ಸು ಇಷ್ಟಪಡದ ಕಾರ್ಯಗಳಿಂದ ಸ್ವರ್ಗವನ್ನು ಮುಚ್ಚಲಾಗಿದೆ ಮತ್ತು ಸುತ್ತುವರಿಯಲಾಗಿದೆ. ಯಾರು ಈ ವಿಷಯದಲ್ಲಿ ಮನಸ್ಸಿನ ಆಸೆಗಳಿಗೆ ವಿರುದ್ಧವಾಗಿ ನಿಂತು ಪರಿಶ್ರಮ ಪಡುತ್ತಾನೋ ಅವನು ಸ್ವರ್ಗಕ್ಕೆ ಅರ್ಹನಾಗಿದ್ದಾನೆ.

فوائد الحديث

ಕೆಟ್ಟ ಮತ್ತು ಹೊಲಸು ಕೃತ್ಯಗಳನ್ನು ಶೈತಾನನು ಸುಂದರವಾಗಿ ತೋರಿಸಿ ಕೊಡುವುದು ಮನಸ್ಸಿನಲ್ಲಿ ಮೋಹ ಉಂಟಾಗಲು ಕಾರಣವಾಗುತ್ತದೆ. ಎಲ್ಲಿಯವರೆಗೆಂದರೆ ಮನಸ್ಸು ಅದನ್ನು ಉತ್ತಮವಾಗಿ ಕಂಡು ಅದರೆಡೆಗೆ ವಾಲುತ್ತದೆ.

ನಿಷೇಧಿಸಲಾದ ಮೋಹಗಳಿಂದ ದೂರವಿರಬೇಕೆಂದು ಈ ಹದೀಸಿನಲ್ಲಿ ಆಜ್ಞೆ ಇದೆ. ಏಕೆಂದರೆ ಅದು ನರಕಕ್ಕೆ ಸಾಗಿಸುವ ದಾರಿಯಾಗಿದೆ. ಅದೇ ರೀತಿ ಸಂಕಷ್ಟಗಳ ಬಗ್ಗೆ ತಾಳ್ಮೆಯಿಂದ ಇರಬೇಕೆಂಬ ಆಜ್ಞೆ ಇದೆ. ಏಕೆಂದರೆ ಅದು ಸ್ವರ್ಗಕ್ಕೆ ಸಾಗಿಸುವ ದಾರಿಯಾಗಿದೆ.

ಮನಸ್ಸಿನ ವಿರುದ್ಧ ಹೋರಾಡುವುದು, ಆರಾಧನೆಗಳನ್ನು ಮಾಡಲು ಪರಿಶ್ರಮಿಸುವುದು, ಸತ್ಕರ್ಮಗಳನ್ನು ಆವರಿಸಿಕೊಂಡಿರುವ ಕಷ್ಟಕೋಟಲೆಗಳನ್ನು ಸಹಿಸುವುದು ಮುಂತಾದವುಗಳ ಶ್ರೇಷ್ಠತೆಯನ್ನು ಈ ಹದೀಸ್ ವಿವರಿಸುತ್ತದೆ.

التصنيفات

Descriptions of Paradise and Hell