“ಅಲ್ಲಾಹನೊಂದಿಗೆ ಸಹಭಾಗಿತ್ವ ಮಾಡದ ಸ್ಥಿತಿಯಲ್ಲಿ ಯಾರು ಅವನನ್ನು ಭೇಟಿಯಾಗುತ್ತಾನೋ ಅವನು ಸ್ವರ್ಗವನ್ನು ಪ್ರವೇಶಿಸುತ್ತಾನೆ.…

“ಅಲ್ಲಾಹನೊಂದಿಗೆ ಸಹಭಾಗಿತ್ವ ಮಾಡದ ಸ್ಥಿತಿಯಲ್ಲಿ ಯಾರು ಅವನನ್ನು ಭೇಟಿಯಾಗುತ್ತಾನೋ ಅವನು ಸ್ವರ್ಗವನ್ನು ಪ್ರವೇಶಿಸುತ್ತಾನೆ. ಅಲ್ಲಾಹನೊಂದಿಗೆ ಸಹಭಾಗಿತ್ವ ಮಾಡಿದ ಸ್ಥಿತಿಯಲ್ಲಿ ಯಾರು ಅವನನ್ನು ಭೇಟಿಯಾಗುತ್ತಾನೋ ಅವನು ನರಕವನ್ನು ಪ್ರವೇಶಿಸುತ್ತಾನೆ.”

ಜಾಬಿರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು(ಸ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಅಲ್ಲಾಹನೊಂದಿಗೆ ಸಹಭಾಗಿತ್ವ ಮಾಡದ ಸ್ಥಿತಿಯಲ್ಲಿ ಯಾರು ಅವನನ್ನು ಭೇಟಿಯಾಗುತ್ತಾನೋ ಅವನು ಸ್ವರ್ಗವನ್ನು ಪ್ರವೇಶಿಸುತ್ತಾನೆ. ಅಲ್ಲಾಹನೊಂದಿಗೆ ಸಹಭಾಗಿತ್ವ ಮಾಡಿದ ಸ್ಥಿತಿಯಲ್ಲಿ ಯಾರು ಅವನನ್ನು ಭೇಟಿಯಾಗುತ್ತಾನೋ ಅವನು ನರಕವನ್ನು ಪ್ರವೇಶಿಸುತ್ತಾನೆ.”

[صحيح] [رواه مسلم]

الشرح

ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡದ ಸ್ಥಿತಿಯಲ್ಲಿ ಮರಣ ಹೊಂದುವವನು, ಅವನ ಕೆಲವು ಪಾಪಗಳಿಗಾಗಿ ಅವನಿಗೆ ಶಿಕ್ಷೆ ನೀಡಲಾದರೂ ಸಹ, ಅವನು ಸ್ವರ್ಗವಾಸಿಯಾಗುತ್ತಾನೆ ಮತ್ತು ಅಲ್ಲಾಹನೊಂದಿಗೆ ಸಹಭಾಗಿತ್ವ ಮಾಡಿದ ಸ್ಥಿತಿಯಲ್ಲಿ ಮರಣ ಹೊಂದುವವನು ಶಾಶ್ವತ ನರಕವಾಸಿಯಾಗುತ್ತಾನೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ತಿಳಿಸುತ್ತಿದ್ದಾರೆ

فوائد الحديث

ಏಕದೇವತ್ವದ ಶ್ರೇಷ್ಠತೆಯನ್ನು ಮತ್ತು ಅದು ಶಾಶ್ವತ ನರಕವಾಸದಿಂದ ಮುಕ್ತಿ ಪಡೆಯುವ ಮಾರ್ಗವಾಗಿದೆ ಎನ್ನುವುದನ್ನು ಈ ಹದೀಸ್ ತಿಳಿಸುತ್ತದೆ.

ಮನುಷ್ಯನು ಸ್ವರ್ಗ ಅಥವಾ ನರಕಕ್ಕೆ ಹತ್ತಿರವಾಗಿದ್ದಾನೆ ಮತ್ತು ಅವನ ಮತ್ತು ಅವುಗಳ ನಡುವೆ ಮರಣವಲ್ಲದೆ ಬೇರೇನೂ ತಡೆಯಿಲ್ಲ ಎಂದು ಈ ಹದೀಸ್ ತಿಳಿಸುತ್ತದೆ.

ಬಹುದೇವಾರಾಧನೆ—ಅದು ಕನಿಷ್ಠ ಅಥವಾ ಗರಿಷ್ಠ ರೂಪದಲ್ಲಿದ್ದರೂ ಸಹ—ಅದರ ಬಗ್ಗೆ ಎಚ್ಚರಿಕೆ ವಹಿಸಬೇಕು. ಏಕೆಂದರೆ, ಬಹುದೇವಾರಾಧನೆಯಿಂದ ಸಂಪೂರ್ಣ ದೂರವಾದರೆ ಮಾತ್ರ ನರಕದಿಂದ ಮುಕ್ತಿ ಸಿಗುತ್ತದೆ.

ಮನುಷ್ಯನ ಕೊನೆಯ ಕರ್ಮಗಳು ನಿರ್ಣಾಯಕವಾಗಿರುತ್ತವೆ ಎಂದು ಈ ಹದೀಸ್ ತಿಳಿಸುತ್ತದೆ.

التصنيفات

Polytheism, Descriptions of Paradise and Hell