ಯಾರು ಒಂದು ಜನಸಮೂಹವನ್ನು ಅನುಕರಿಸುತ್ತಾರೋ ಅವರು ಅವರಲ್ಲಿ ಸೇರುತ್ತಾರೆ

ಯಾರು ಒಂದು ಜನಸಮೂಹವನ್ನು ಅನುಕರಿಸುತ್ತಾರೋ ಅವರು ಅವರಲ್ಲಿ ಸೇರುತ್ತಾರೆ

ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಒಂದು ಜನಸಮೂಹವನ್ನು ಅನುಕರಿಸುತ್ತಾರೋ ಅವರು ಅವರಲ್ಲಿ ಸೇರುತ್ತಾರೆ."

[Hasan/Sound.] [Abu Dawood]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಸತ್ಯನಿಷೇಧಿಗಳು, ದುಷ್ಕರ್ಮಿಗಳು ಅಥವಾ ಸಜ್ಜನರನ್ನು ಅನುಕರಿಸುವವರು—ಅಂದರೆ ವಿಶೇಷವಾಗಿ ಅವರಲ್ಲಿರುವ ಯಾವುದಾದರೂ ನಂಬಿಕೆ, ಆರಾಧನೆ ಅಥವಾ ಸಂಪ್ರದಾಯವನ್ನು ಅನುಕರಿಸುವವರು ಅವರಲ್ಲಿ ಸೇರುತ್ತಾರೆ. ಏಕೆಂದರೆ ಬಾಹ್ಯವಾಗಿ ಅವರನ್ನು ಅನುಕರಿಸುವುದು ಅಂತರಂಗದಲ್ಲೂ ಅವರನ್ನು ಅನುಕರಿಸಲು ಕಾರಣವಾಗುತ್ತದೆ. ನಿಸ್ಸಂದೇಹವಾಗಿಯೂ, ಒಂದು ಜನಸಮೂಹವನ್ನು ಅನುಕರಿಸಲು ಅವರ ಬಗ್ಗೆ ಮೆಚ್ಚುಗೆಯನ್ನು ಹೊಂದಿರುವುದೇ ಕಾರಣವಾಗಿದೆ. ಇದು ಅವರನ್ನು ಪ್ರೀತಿಸಲು, ಅತಿಯಾಗಿ ಗೌರವಿಸಲು ಮತ್ತು ಅವರ ಕಡೆಗೆ ಆಕರ್ಷಿತರಾಗಲು ಕಾರಣವಾಗಬಹುದು. ಇದು ಅವರನ್ನು ಆಂತರಿಕವಾಗಿಯೂ ಮತ್ತು ಅವರು ಮಾಡುವ ಆರಾಧನೆಗಳಲ್ಲಿಯೂ ಅವನ್ನು ಅನುಕರಿಸಲು ಕಾರಣವಾಗಬಹುದು.ಅಲ್ಲಾಹು ಕಾಪಾಡಲಿ.

فوائد الحديث

ಸತ್ಯನಿಷೇಧಿಗಳನ್ನು ಮತ್ತು ದುಷ್ಕರ್ಮಿಗಳನ್ನು ಅನುಕರಿಸಬಾರದೆಂದು ಈ ಹದೀಸ್ ಎಚ್ಚರಿಸುತ್ತದೆ.

ಸಜ್ಜನರನ್ನು ಅನುಕರಿಸಲು ಮತ್ತು ಅವರ ಮಾದರಿಯನ್ನು ಸ್ವೀಕರಿಸಲು ಈ ಹದೀಸ್ ಒತ್ತಾಯಿಸುತ್ತದೆ.

ಬಾಹ್ಯ ಅನುಕರಣೆಯು ಆಂತರಿಕ ಪ್ರೀತಿಗೆ ಕಾರಣವಾಗುತ್ತದೆ.

ಮನುಷ್ಯನ ಪಾಪ ಮತ್ತು ಶಿಕ್ಷೆಯು ಅವನು ಮಾಡುವ ಅನುಕರಣೆಯ ವಿಧ ಮತ್ತು ತೀವ್ರತೆಗೆ ಅನುಗುಣವಾಗಿರುತ್ತದೆ.

ಸತ್ಯನಿಷೇಧಿಗಳ ಧಾರ್ಮಿಕ ಮತ್ತು ಸಾಂಪ್ರದಾಯಿಕ ಆಚರಣೆಗಳನ್ನು ಅನುಕರಿಸುವುದನ್ನು ಈ ಹದೀಸ್ ವಿರೋಧಿಸುತ್ತದೆ. ಆದರೆ ಅವರ ಧರ್ಮಕ್ಕೆ ಸೀಮಿತವಲ್ಲದ ಇತರ ಕಾರ್ಯಗಳನ್ನು ಕಲಿಯುವುದು—ಉದಾಹರಣೆಗೆ, ಕರಕುಶಲ ತರಬೇತಿ—ಈ ವಿರೋಧದಲ್ಲಿ ಒಳಪಡುವುದಿಲ್ಲ.