ತನ್ನ (ಮುಸಲ್ಮಾನ) ಸಹೋದರನೊಂದಿಗೆ ಮೂರು ರಾತ್ರಿಗಳಿಗಿಂತ ಹೆಚ್ಚು ಮಾತನಾಡದೆ ಇರಲು ಯಾರಿಗೂ ಅನುಮತಿಯಿಲ್ಲ. ಅವರಿಬ್ಬರು ಎದುರಾಗುವಾಗ…

ತನ್ನ (ಮುಸಲ್ಮಾನ) ಸಹೋದರನೊಂದಿಗೆ ಮೂರು ರಾತ್ರಿಗಳಿಗಿಂತ ಹೆಚ್ಚು ಮಾತನಾಡದೆ ಇರಲು ಯಾರಿಗೂ ಅನುಮತಿಯಿಲ್ಲ. ಅವರಿಬ್ಬರು ಎದುರಾಗುವಾಗ ಒಬ್ಬ ಆ ಕಡೆ ಮತ್ತು ಇನ್ನೊಬ್ಬ ಈ ಕಡೆ ಮುಖ ತಿರುಗಿಸುತ್ತಾನೆ. ಅವರಲ್ಲಿ ಮೊದಲು ಸಲಾಮ್ ಹೇಳುವವನೇ ಅತ್ಯುತ್ತಮನು.”

ಅಬೂ ಅಯ್ಯೂಬ್ ಅನ್ಸಾರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ತನ್ನ (ಮುಸಲ್ಮಾನ) ಸಹೋದರನೊಂದಿಗೆ ಮೂರು ರಾತ್ರಿಗಳಿಗಿಂತ ಹೆಚ್ಚು ಮಾತನಾಡದೆ ಇರಲು ಯಾರಿಗೂ ಅನುಮತಿಯಿಲ್ಲ. ಅವರಿಬ್ಬರು ಎದುರಾಗುವಾಗ ಒಬ್ಬ ಆ ಕಡೆ ಮತ್ತು ಇನ್ನೊಬ್ಬ ಈ ಕಡೆ ಮುಖ ತಿರುಗಿಸುತ್ತಾನೆ. ಅವರಲ್ಲಿ ಮೊದಲು ಸಲಾಮ್ ಹೇಳುವವನೇ ಅತ್ಯುತ್ತಮನು.”

[Sahih/Authentic.] [Al-Bukhari and Muslim]

الشرح

ಮೂರು ರಾತ್ರಿಗಿಂತ ಹೆಚ್ಚು ತನ್ನ ಮುಸ್ಲಿಂ ಸಹೋದರನೊಂದಿಗೆ ಸಿಟ್ಟು ಮಾಡಿಕೊಳ್ಳುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿರೋಧಿಸಿದ್ದಾರೆ. ಅವರಿಬ್ಬರು ಭೇಟಿಯಾಗುವಾಗ ಯಾರೂ ಸಲಾಂ ಹೇಳುವುದಿಲ್ಲ ಮತ್ತು ಮಾತನಾಡುವುದಿಲ್ಲ. ಸಿಟ್ಟು ಮಾಡಿಕೊಂಡಿರುವ ಇವರಿಬ್ಬರಲ್ಲಿ ಸಿಟ್ಟನ್ನು ಕೊನೆಗೊಳಿಸಿ ಮೊದಲು ಸಲಾಂ ಹೇಳುವವನೇ ಅತಿಶ್ರೇಷ್ಠನು. ಸಿಟ್ಟು ಎಂಬುದರ ಮೂಲಕ ಇಲ್ಲಿ ಉದ್ದೇಶಿಸಿರುವುದು ವೈಯಕ್ತಿಕ ಉದ್ದೇಶಕ್ಕಾಗಿರುವ ಸಿಟ್ಟನ್ನಾಗಿದೆ. ಆದರೆ ಅಲ್ಲಾಹನಿಗಾಗಿ ಸಿಟ್ಟು ಮಾಡಿಕೊಳ್ಳುವುದು, ಅಂದರೆ ಪಾಪಿಗಳು, ನೂತನವಾದಿಗಳು, ದುಷ್ಕರ್ಮಿಗಳು ಮುಂತಾದವರೊಡನೆ ಸಿಟ್ಟು ಮಾಡಿಕೊಳ್ಳುವುದಕ್ಕೆ ಸಮಯದ ಮಿತಿಯಿಲ್ಲ. ಇದು ಒಳಿತಿನ ದೃಷ್ಟಿಯಿಂದ ಮಾಡಿಕೊಳ್ಳುವ ಸಿಟ್ಟಾಗಿದ್ದು, ಸಿಟ್ಟಿನ ಕಾರಣವು ನಿವಾರಣೆಯಾದರೆ ಸಿಟ್ಟು ನಿವಾರಣೆಯಾಗುತ್ತದೆ.

فوائد الحديث

ಮನುಷ್ಯ ಪ್ರಕೃತಿಯನ್ನು ಗಮನದಲ್ಲಿಟ್ಟುಕೊಂಡು ಮೂರು ದಿನ ಅಥವಾ ಅದಕ್ಕಿಂತ ಕಡಿಮೆ ದಿನ ಸಿಟ್ಟು ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ ಮತ್ತು ಸಿಟ್ಟು ನಿವಾರಣೆಯಾಗುವುದಕ್ಕಾಗಿ ಮೂರು ದಿನಗಳವರೆಗೆ ಅದನ್ನು ಕ್ಷಮಿಸಲಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.

ಸಲಾಂ ಹೇಳುವುದರ ಶ್ರೇಷ್ಠತೆಯನ್ನು, ಅದು ಮನಸ್ಸಿನಲ್ಲಿರುವ ಕೋಪವನ್ನು ನಿವಾರಿಸುತ್ತದೆ ಮತ್ತು ಅದು ಪ್ರೀತಿಯ ಸಂಕೇತವಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.

ಮುಸಲ್ಮಾನರ ನಡುವೆ ಸಹೋದರತೆ ಮತ್ತು ಅನ್ಯೋನ್ಯತೆ ಬೆಳೆಸಲು ಇಸ್ಲಾಂ ಧರ್ಮವು ತೋರುವ ಉತ್ಸಾಹವನ್ನು ಈ ಹದೀಸ್ ತಿಳಿಸುತ್ತದೆ.