ಸುಲಭಗೊಳಿಸಿರಿ, ಕಷ್ಟಗೊಳಿಸಬೇಡಿ; ಸಿಹಿಸುದ್ದಿ ತಿಳಿಸಿರಿ, ಗಾಬರಿಗೊಳಿಸಬೇಡಿ

ಸುಲಭಗೊಳಿಸಿರಿ, ಕಷ್ಟಗೊಳಿಸಬೇಡಿ; ಸಿಹಿಸುದ್ದಿ ತಿಳಿಸಿರಿ, ಗಾಬರಿಗೊಳಿಸಬೇಡಿ

ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸುಲಭಗೊಳಿಸಿರಿ, ಕಷ್ಟಗೊಳಿಸಬೇಡಿ; ಸಿಹಿಸುದ್ದಿ ತಿಳಿಸಿರಿ, ಗಾಬರಿಗೊಳಿಸಬೇಡಿ."

[صحيح] [متفق عليه]

الشرح

ಜನರಿಗೆ ವಿಷಯಗಳನ್ನು ಹಗುರಗೊಳಿಸಬೇಕು ಮತ್ತು ಸುಲಭಗೊಳಿಸಬೇಕು; ಇಹಲೋಕ ಮತ್ತು ಪರಲೋಕಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನೂ ಅವರಿಗೆ ಕಷ್ಟಗೊಳಿಸಬಾರದೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಆದೇಶಿಸುತ್ತಿದ್ದಾರೆ. ಆದರೆ ಹೀಗೆ ಮಾಡುವುದು ಅಲ್ಲಾಹು ಅನುಮತಿಸಿದ ಮತ್ತು ಅವನ ನಿಯಮಗಳ ಚೌಕಟ್ಟಿನಲ್ಲಿರಬೇಕಾಗಿದೆ. ಜನರಿಗೆ ಒಳಿತಿನ ಬಗ್ಗೆ ಸಿಹಿ ಸುದ್ದಿ ನೀಡಬೇಕು ಮತ್ತು ಅವರನ್ನು ಗಾಬರಿಗೊಳಿಸಿ ಒಳಿತಿನಿಂದ ದೂರವಾಗುವಂತೆ ಮಾಡಬಾರದು ಎಂದು ಅವರು ಇಲ್ಲಿ ಒತ್ತಾಯಿಸುತ್ತಿದ್ದಾರೆ.

فوائد الحديث

ಜನರು ಅಲ್ಲಾಹನನ್ನು ಪ್ರೀತಿಸುವಂತೆ ಮಾಡುವುದು ಮತ್ತು ಒಳಿತುಗಳಲ್ಲಿ ಅವರಿಗೆ ಪ್ರಚೋದನೆ ನೀಡುವುದು ಸತ್ಯವಿಶ್ವಾಸಿಗೆ ಕಡ್ಡಾಯವಾಗಿದೆ ಎಂದು ಈ ಹದೀಸ್ ತಿಳಿಸುತ್ತದೆ.

ಧರ್ಮ ಪ್ರಚಾರಕರು ಇಸ್ಲಾಂ ಧರ್ಮವನ್ನು ಜನರಿಗೆ ತಲುಪಿಸುವ ಅತ್ಯುತ್ತಮ ವಿಧಾನದ ಬಗ್ಗೆ ವಿವೇಕಯುತವಾಗಿ ಆಲೋಚಿಸಬೇಕೆಂದು ಈ ಹದೀಸ್ ತಿಳಿಸುತ್ತದೆ.

ಸಿಹಿ ಸುದ್ದಿಯನ್ನು ತಿಳಿಸುವುದರಿಂದ ಜನರು ಧರ್ಮ ಪ್ರಚಾರಕನ ಬಗ್ಗೆ ಮತ್ತು ಅವನು ತಿಳಿಸಿಕೊಡುವ ಧರ್ಮದ ಬಗ್ಗೆ ಸಂತೋಷಪಡಲು, ಸ್ವೀಕರಿಸಲು ಮತ್ತು ನಿರಾಳರಾಗಲು ಕಾರಣವಾಗುತ್ತದೆ.

ಕಷ್ಟಗೊಳಿಸುವುದರಿಂದ ಜನರು ಗಾಬರಿಯಾಗಲು, ಹಿಂಜರಿಯಲು ಮತ್ತು ಧರ್ಮಪ್ರಚಾರಕನ ಮಾತಿನಲ್ಲಿ ಸಂಶಯ ಪಡಲು ಕಾರಣವಾಗುತ್ತದೆ.

ಅಲ್ಲಾಹನಿಗೆ ದಾಸರ ಮೇಲಿರುವ ವಿಶಾಲವಾದ ಕರುಣೆಯನ್ನು ಮತ್ತು ಅವನು ತನ್ನ ದಾಸರಿಗೆ ಸುಲಭ ಮತ್ತು ಸರಳವಾದ ಧರ್ಮವನ್ನು ಅನುಮೋದಿಸಿದ್ದಾನೆಂದು ಈ ಹದೀಸ್ ತಿಳಿಸುತ್ತದೆ.

ಆದೇಶಿಸಲಾದ ಸುಲಭೀಕರಣವು ಧರ್ಮದ ಚೌಕಟ್ಟಿನೊಳಗೆ ಇರುವುದಕ್ಕೆ ಮಾತ್ರ ಸೀಮಿತವಾಗಿದೆ.

التصنيفات

Praiseworthy Morals