ನನ್ನ ಸಮುದಾಯದಲ್ಲಿರುವ ಎಲ್ಲರೂ ಸ್ವರ್ಗಕ್ಕೆ ಹೋಗುತ್ತಾರೆ; ನಿರಾಕರಿಸಿದವನ ಹೊರತು

ನನ್ನ ಸಮುದಾಯದಲ್ಲಿರುವ ಎಲ್ಲರೂ ಸ್ವರ್ಗಕ್ಕೆ ಹೋಗುತ್ತಾರೆ; ನಿರಾಕರಿಸಿದವನ ಹೊರತು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನನ್ನ ಸಮುದಾಯದಲ್ಲಿರುವ ಎಲ್ಲರೂ ಸ್ವರ್ಗಕ್ಕೆ ಹೋಗುತ್ತಾರೆ; ನಿರಾಕರಿಸಿದವನ ಹೊರತು." ಅನುಯಾಯಿಗಳು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! (ಸ್ವರ್ಗಕ್ಕೆ ಹೋಗಲು) ನಿರಾಕರಿಸುವವನು ಯಾರು?" ಅವರು ಉತ್ತರಿಸಿದರು: "ಯಾರು ನನ್ನ ಆಜ್ಞೆಗಳನ್ನು ಪಾಲಿಸುತ್ತಾನೋ ಅವನು ಸ್ವರ್ಗಕ್ಕೆ ಹೋಗುತ್ತಾನೆ; ಮತ್ತು ಯಾರು ನನ್ನ ಆಜ್ಞೆಗಳನ್ನು ಪಾಲಿಸುವುದಿಲ್ಲವೋ ಅವನು (ಸ್ವರ್ಗಕ್ಕೆ ಹೋಗಲು) ನಿರಾಕರಿಸಿದನು."

[صحيح] [رواه البخاري]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅವರ ಸಮುದಾಯಕ್ಕೆ ಸೇರಿದ ಎಲ್ಲರೂ ಸ್ವರ್ಗಕ್ಕೆ ಹೋಗುತ್ತಾರೆ; ನಿರಾಕರಿಸಿದವರ ಹೊರತು! ಆಗ ಸಂಗಡಿಗರು (ಅಲ್ಲಾಹು ಅವರೆಲ್ಲರ ಬಗ್ಗೆ ಸಂಪ್ರೀತನಾಗಲಿ) ಕೇಳುತ್ತಾರೆ: "ಓ ಅಲ್ಲಾಹನ ಸಂದೇಶವಾಹಕರೇ! ನಿರಾಕರಿಸುವವರು ಯಾರು?!" ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸುತ್ತಾ ಹೇಳುತ್ತಾರೆ: "ಯಾರು ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಜ್ಞಾಪಾಲನೆ ಮಾಡುತ್ತಾನೋ ಮತ್ತು ಅನುಸರಿಸುತ್ತಾನೋ ಅವನು ಸ್ವರ್ಗಕ್ಕೆ ಹೋಗುತ್ತಾನೆ; ಆದರೆ, ಯಾರು ಅವರ ಆಜ್ಞಾಪಾಲನೆ ಮಾಡುವುದಿಲ್ಲವೋ ಮತ್ತು ಧರ್ಮನಿಯಮಗಳನ್ನು ಅನುಸರಿಸುವುದಿಲ್ಲವೋ ಅವನು ತನ್ನ ದುಷ್ಕರ್ಮಗಳ ನಿಮಿತ್ತ ಸ್ವರ್ಗಕ್ಕೆ ಹೋಗಲು ನಿರಾಕರಿಸಿದ್ದಾನೆ."

فوائد الحديث

ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಸರಿಸುವುದು ಅಲ್ಲಾಹನಿಗೆ ವಿಧೇಯತೆ ತೋರುವ ಒಂದು ಭಾಗವಾಗಿದೆ. ಅವರನ್ನು ಅನುಸರಿಸದಿರುವುದು ಅಲ್ಲಾಹನಿಗೆ ತೋರುವ ಅವಿಧೇಯತೆಯಾಗಿದೆ.

ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಸರಿಸಿದರೆ ಸ್ವರ್ಗ ಖಾತ್ರಿಯಾಗುತ್ತದೆ ಮತ್ತು ಅವರನ್ನು ಅನುಸರಿಸದಿದ್ದರೆ ನರಕ ಖಾತ್ರಿಯಾಗುತ್ತದೆ.

ಅಲ್ಲಾಹನಿಗೆ ಮತ್ತು ಸಂದೇಶವಾಹಕರಿಗೆ ವಿಧೇಯರಾಗಿರುವವರಿಗೆ ಈ ಹದೀಸ್ ಸುವಾರ್ತೆಯನ್ನು ತಿಳಿಸುತ್ತದೆ. ಅಂದರೆ ಅವರೆಲ್ಲರೂ ಸ್ವರ್ಗಕ್ಕೆ ಹೋಗುತ್ತಾರೆ. ಆದರೆ ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ಅನುಸರಿಸದವರು ಸ್ವರ್ಗಕ್ಕೆ ಹೋಗುವುದಿಲ್ಲ.

ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಮುದಾಯದ ಮೇಲಿರುವ ಸಹಾನುಭೂತಿ ಮತ್ತು ಸಮುದಾಯಕ್ಕೆ ಸನ್ಮಾರ್ಗವನ್ನು ತೋರಿಸಲು ಅವರಲ್ಲಿದ್ದ ತವಕವನ್ನು ಈ ಹದೀಸ್ ವ್ಯಕ್ತಪಡಿಸುತ್ತದೆ.

التصنيفات

Our Prophet Muhammad, may Allah's peace and blessings be upon him