ಯಾರು ಇತರರಿಗೆ ತೊಂದರೆ ಕೊಡುತ್ತಾನೋ ಅವನಿಗೆ ಅಲ್ಲಾಹು ತೊಂದರೆ ಕೊಡುತ್ತಾನೆ. ಯಾರು ಇತರರಿಗೆ ಕಷ್ಟಗೊಳಿಸುತ್ತಾನೋ ಅವನಿಗೆ…

ಯಾರು ಇತರರಿಗೆ ತೊಂದರೆ ಕೊಡುತ್ತಾನೋ ಅವನಿಗೆ ಅಲ್ಲಾಹು ತೊಂದರೆ ಕೊಡುತ್ತಾನೆ. ಯಾರು ಇತರರಿಗೆ ಕಷ್ಟಗೊಳಿಸುತ್ತಾನೋ ಅವನಿಗೆ ಅಲ್ಲಾಹು ಕಷ್ಟಗೊಳಿಸುತ್ತಾನೆ

ಅಬೂ ಸಿರ್ಮ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಇತರರಿಗೆ ತೊಂದರೆ ಕೊಡುತ್ತಾನೋ ಅವನಿಗೆ ಅಲ್ಲಾಹು ತೊಂದರೆ ಕೊಡುತ್ತಾನೆ. ಯಾರು ಇತರರಿಗೆ ಕಷ್ಟಗೊಳಿಸುತ್ತಾನೋ ಅವನಿಗೆ ಅಲ್ಲಾಹು ಕಷ್ಟಗೊಳಿಸುತ್ತಾನೆ."

[حسن] [رواه أبو داود والترمذي وابن ماجه وأحمد]

الشرح

ಮುಸಲ್ಮಾನರಿಗೆ ದೈಹಿಕ, ಆರ್ಥಿಕ, ಕೌಟುಂಬಿಕ ಮುಂತಾದ ಯಾವುದೇ ವಿಧದಲ್ಲಾದರೂ ತೊಂದರೆ ಕೊಡುವುದು ಅಥವಾ ಕಷ್ಟಗೊಳಿಸುವುದರ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಎಚ್ಚರಿಸುತ್ತಿದ್ದಾರೆ. ಯಾರಾದರೂ ಅದನ್ನು ಮಾಡಿದರೆ ಅವರ ಮಾಡಿದಂತೆಯೇ ಅಲ್ಲಾಹು ಕೂಡ ಅವರಿಗೆ ಪ್ರತಿಫಲ ಮತ್ತು ಶಿಕ್ಷೆಯನ್ನು ನೀಡುತ್ತಾನೆ.

فوائد الحديث

ಮುಸಲ್ಮಾನರಿಗೆ ತೊಂದರೆ ಕೊಡುವುದು ಅಥವಾ ಕಷ್ಟಗೊಳಿಸುವುದು ನಿಷೇಧಿಸಲಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.

ಅಲ್ಲಾಹು ದಾಸರೊಡನೆ ಪ್ರತೀಕಾರ ಪಡೆಯುತ್ತಾನೆಂದು ಈ ಹದೀಸ್ ತಿಳಿಸುತ್ತದೆ.

التصنيفات

Rulings of Allegiance and Dissociation