ನೀವು ಒಬ್ಬ ವ್ಯಕ್ತಿಯ ನಾಯಕತ್ವದಲ್ಲಿ ಒಗ್ಗಟ್ಟಿನಲ್ಲಿರುವಾಗ, ಯಾರಾದರೂ ಬಂದು ನಿಮ್ಮನ್ನು ಬೇರೆ ಬೇರೆ ಮಾಡಲು, ಅಥವಾ ನಿಮ್ಮ…

ನೀವು ಒಬ್ಬ ವ್ಯಕ್ತಿಯ ನಾಯಕತ್ವದಲ್ಲಿ ಒಗ್ಗಟ್ಟಿನಲ್ಲಿರುವಾಗ, ಯಾರಾದರೂ ಬಂದು ನಿಮ್ಮನ್ನು ಬೇರೆ ಬೇರೆ ಮಾಡಲು, ಅಥವಾ ನಿಮ್ಮ ಸಮಾಜವನ್ನು ಒಡೆಯಲು ಉದ್ದೇಶಿಸಿದರೆ, ಅವನೊಂದಿಗೆ ಹೋರಾಡಿ

ಅರ್ಫಜ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನೀವು ಒಬ್ಬ ವ್ಯಕ್ತಿಯ ನಾಯಕತ್ವದಲ್ಲಿ ಒಗ್ಗಟ್ಟಿನಲ್ಲಿರುವಾಗ, ಯಾರಾದರೂ ಬಂದು ನಿಮ್ಮನ್ನು ಬೇರೆ ಬೇರೆ ಮಾಡಲು, ಅಥವಾ ನಿಮ್ಮ ಸಮಾಜವನ್ನು ಒಡೆಯಲು ಉದ್ದೇಶಿಸಿದರೆ, ಅವನೊಂದಿಗೆ ಹೋರಾಡಿ."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಮುಸಲ್ಮಾನರು ಒಬ್ಬ ಆಡಳಿತಗಾರನ ನಾಯಕತ್ವದಲ್ಲಿ ಮತ್ತು ಒಂದು ಸಮಾಜದಲ್ಲಿ ಒಗ್ಗಟ್ಟಿನಲ್ಲಿರುವಾಗ, ಒಬ್ಬ ವ್ಯಕ್ತಿ ಬಂದು ಆಡಳಿತದ ವಿಷಯದಲ್ಲಿ ವಿವಾದ ಹುಟ್ಟುಹಾಕಲು, ಅಥವಾ ಮುಸಲ್ಮಾನರನ್ನು ಒಂದಕ್ಕಿಂತ ಹೆಚ್ಚು ಸಮಾಜಗಳಾಗಿ ವಿಂಗಡಿಸಲು ಉದ್ದೇಶಿಸಿದರೆ, ಅವನಿಂದ ಉಂಟಾಗುವ ಹಾನಿಯನ್ನು ತಡೆಗಟ್ಟಲು ಮತ್ತು ಮುಸಲ್ಮಾನರ ರಕ್ತವನ್ನು (ಜೀವವನ್ನು) ಸಂರಕ್ಷಿಸಲು ಅವನನ್ನು ತಡೆಯುವುದು ಮತ್ತು ಅವನ ವಿರುದ್ಧ ಹೋರಾಡುವುದು ಕಡ್ಡಾಯವಾಗಿದೆ.

فوائد الحديث

ಪಾಪವಲ್ಲದ ಎಲ್ಲಾ ವಿಷಯಗಳಲ್ಲೂ ಆಡಳಿತಗಾರರನ್ನು ಅನುಸರಿಸುವುದು ಕಡ್ಡಾಯವಾಗಿದೆ, ಮತ್ತು ಅವರ ವಿರುದ್ಧ ಬಂಡೇಳುವುದು ನಿಷಿದ್ಧವಾಗಿದೆ.

ಮುಸಲ್ಮಾನರ ಮುಖಂಡರ ವಿರುದ್ಧ ಮತ್ತು ಮುಸಲ್ಮಾನರ ಸಮಾಜದ ವಿರುದ್ಧ ಬಂಡೇಳುವವರೊಡನೆ ಹೋರಾಡುವುದು ಕಡ್ಡಾಯವಾಗಿದೆ. ಅವರು ಎಷ್ಟೇ ದೊಡ್ಡ ಸ್ಥಾನಮಾನ, ಗೌರವ ಅಥವಾ ವಂಶವನ್ನು ಹೊಂದಿದ್ದರೂ ಸಹ.

ಒಗ್ಗಟ್ಟಿನಲ್ಲಿರಲು ಮತ್ತು ವಿಭಜನೆ ಹಾಗೂ ಭಿನ್ನಾಭಿಪ್ರಾಯಗಳನ್ನು ಬಿಟ್ಟುಬಿಡಲು ಪ್ರೋತ್ಸಾಹಿಸಲಾಗಿದೆ.

التصنيفات

Rebelling against the Muslim Ruler