Foods and Drinks

Foods and Drinks

1- "ನಿಶ್ಚಯವಾಗಿಯೂ ಅಲ್ಲಾಹು ಪ್ರತಿಯೊಂದು ವಿಷಯದಲ್ಲೂ ಉತ್ತಮವಾಗಿ ವರ್ತಿಸುವುದನ್ನು ಕಡ್ಡಾಯಗೊಳಿಸಿದ್ದಾನೆ*. ಆದ್ದರಿಂದ ನೀವು (ಪ್ರತೀಕಾರಕ್ಕಾಗಿ) ಕೊಲ್ಲುವಾಗ ಉತ್ತಮ ರೀತಿಯಲ್ಲಿ ಕೊಲ್ಲಿರಿ. ನೀವು (ಪ್ರಾಣಿಗಳನ್ನು ಮಾಂಸಕ್ಕಾಗಿ) ಕೊಯ್ಯುವಾಗ ಉತ್ತಮ ರೀತಿಯಲ್ಲಿ ಕೊಯ್ಯಿರಿ. ನಿಮ್ಮಲ್ಲೊಬ್ಬನು ಕೊಯ್ಯುವಾಗ ಚೂರಿಯನ್ನು ಹರಿತಗೊಳಿಸಲಿ ಮತ್ತು ಪ್ರಾಣಿಗೆ ನಿರಾಳತೆಯನ್ನು ನೀಡಲಿ."

3- "ನಿಶ್ಚಯವಾಗಿಯೂ ಅಲ್ಲಾಹು ಮತ್ತು ಅವನ ಸಂದೇಶವಾಹಕರು ಮದ್ಯ, ಸತ್ತ ಪ್ರಾಣಿ, ಹಂದಿ ಮಾಂಸ ಮತ್ತು ವಿಗ್ರಹಗಳ ಮಾರಾಟವನ್ನು ನಿಷೇಧಿಸಿದ್ದಾರೆ."* ಆಗ ಒಬ್ಬರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಸತ್ತ ಪ್ರಾಣಿಗಳ ಕೊಬ್ಬನ್ನು ನಿಷೇಧಿಸಲಾಗಿದೆಯೇ? ಏಕೆಂದರೆ, ಇದನ್ನು ಹಡಗುಗಳಿಗೆ ಲೇಪಿಸಲು ಮತ್ತು ತೊಗಲನ್ನು ಹದಗೊಳಿಸಲು ಬಳಸಲಾಗುತ್ತದೆ. ಜನರು ಇದನ್ನು ದೀಪ ಉರಿಸಲು ಕೂಡ ಬಳಸುತ್ತಾರೆ." ಅವರು ಹೇಳಿದರು: "ಇಲ್ಲ. ಅದು ನಿಷೇಧಿಸಲಾಗಿದೆ." ನಂತರ ಇದಕ್ಕೆ ಸಂಬಂಧಿಸಿ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ಯಹೂದಿಗಳನ್ನು ನಾಶಗೊಳಿಸಲಿ. ಅಲ್ಲಾಹು ಅವರಿಗೆ ಪ್ರಾಣಿಗಳ ಕೊಬ್ಬನ್ನು ನಿಷೇಧಿಸಿದಾಗ, ಅವರು ಅದನ್ನು ಕರಗಿಸಿ, ಅದರ ಎಣ್ಣೆಯನ್ನು ಮಾರಾಟ ಮಾಡಿದರು ಮತ್ತು ಅದರ ಹಣವನ್ನು ತಿಂದು ತೇಗಿದರು."