Jurisprudence of Transactions

Jurisprudence of Transactions

3- ನಾನು ಅಶ್‌ಅರಿಗಳಲ್ಲಿ ಸೇರಿದ ಕೆಲವು ಜನರೊಂದಿಗೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಹೋಗಿ ಸವಾರಿ ಮಾಡಲು ಏನಾದರೂ ನೀಡಬೇಕೆಂದು ವಿನಂತಿಸಿದೆ. ಅವರು ಹೇಳಿದರು: "ಅಲ್ಲಾಹನಾಣೆ! ನಿಮಗೆ ಸವಾರಿ ಮಾಡಲು ನಾನು ಏನೂ ನೀಡುವುದಿಲ್ಲ. ನನ್ನ ಬಳಿ ನೀವು ಸವಾರಿ ಮಾಡುವಂತದ್ದು ಏನೂ ಇಲ್ಲ." ನಂತರ, ಅಲ್ಲಾಹು ಇಚ್ಛಿಸಿದಷ್ಟು ಕಾಲ ನಾವು ಕಾದು ಕುಳಿತೆವು. ಆಗ ಅವರ ಬಳಿಗೆ ಕೆಲವು ಒಂಟೆಗಳನ್ನು ತರಲಾಯಿತು. ಅವರು ನಮಗೆ ಮೂರು ಒಂಟೆಗಳನ್ನು ನೀಡಲು ಆದೇಶಿಸಿದರು. ನಾವು ಅಲ್ಲಿಂದ ಹೊರಟಾಗ ನಾವು ಪರಸ್ಪರ ಹೇಳಿದೆವು: "ಅಲ್ಲಾಹು ನಮಗೆ ಸಮೃದ್ಧಿಯನ್ನು ನೀಡಲಾರ. ನಾವು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಹೋಗಿ ಸವಾರಿ ಮಾಡಲು ಏನಾದರೂ ನೀಡಬೇಕೆಂದು ವಿನಂತಿಸಿದ್ದೆವು. ಆದರೆ ಅವರು ನಮಗೆ ಸವಾರಿ ಮಾಡಲು ಏನೂ ನೀಡುವುದಿಲ್ಲವೆಂದು ಆಣೆ ಮಾಡಿ, ನಂತರ ನಮಗೆ ಸವಾರಿ ಮಾಡಲು ನೀಡಿದರು." ಅಬೂ ಮೂಸಾ ಹೇಳಿದರು: ಆದ್ದರಿಂದ, ನಾವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಹೋಗಿ ಅವರಿಗೆ ವಿಷಯವನ್ನು ತಿಳಿಸಿದೆವು. ಆಗ ಅವರು ಹೇಳಿದರು: "ನಿಮಗೆ ಸವಾರಿ ಮಾಡಲು ನೀಡಿದ್ದು ನಾನಲ್ಲ. ಬದಲಿಗೆ, ನಿಮಗೆ ಸವಾರಿ ಮಾಡಲು ನೀಡಿದ್ದು ಅಲ್ಲಾಹು. @ನಿಶ್ಚಯವಾಗಿಯೂ, ಅಲ್ಲಾಹನಾಣೆ! ಅಲ್ಲಾಹು ಇಚ್ಛಿಸಿದರೆ, ನಾನು ಒಂದು ಕಾರ್ಯವನ್ನು ಮಾಡುತ್ತೇನೆಂದು ಪ್ರತಿಜ್ಞೆ ಮಾಡಿ, ನಂತರ ನನಗೆ ಇನ್ನೊಂದು ಕಾರ್ಯವು ಅದಕ್ಕಿಂತ ಉತ್ತಮವೆಂದು ಕಂಡರೆ, ನಾನು ನನ್ನ ಪ್ರತಿಜ್ಞೆಗೆ ಪರಿಹಾರ ನೀಡಿ, ಆ ಉತ್ತಮವಾದ ಕಾರ್ಯವನ್ನು ಮಾಡುತ್ತೇನೆ."

5- "ಚಿನ್ನ ಮತ್ತು ಬೆಳ್ಳಿಯನ್ನು ಹೊಂದಿರುವವನು ಅವುಗಳ ಹಕ್ಕನ್ನು (ಝಕಾತನ್ನು) ನೀಡದಿದ್ದರೆ, ಪುನರುತ್ಥಾನ ದಿನದಂದು ಅವುಗಳನ್ನು ಅಗ್ನಿಯ ಹಾಳೆಗಳಾಗಿ ಪರಿವರ್ತಿಸಿ, ನರಕಾಗ್ನಿಯಲ್ಲಿ ಅವುಗಳನ್ನು ಕಾಯಿಲಾಗುವುದು.* ನಂತರ ಅವನ ಪಾರ್ಶ್ವ, ಹಣೆ ಮತ್ತು ಬೆನ್ನುಗಳಿಗೆ ಅದರಿಂದ ಬರೆ ಹಾಕಲಾಗುವುದು. ಅವು ತಣ್ಣಗಾದಾಗಲೆಲ್ಲಾ ಅದನ್ನು ಪುನಃ ಕಾಯಿಸಲಾಗುವುದು. ಐವತ್ತು ಸಾವಿರ ವರ್ಷಗಳಷ್ಟು ದೀರ್ಘವಾದ ದಿನದಂದು ಅಲ್ಲಾಹು ಅವನ ದಾಸರ ಮಧ್ಯೆ ತೀರ್ಪು ನೀಡಿ ಮುಗಿಸುವ ತನಕ ಇದು ಮುಂದುವರಿಯುವುದು. ನಂತರ ಅವನು ಒಂದೋ ಸ್ವರ್ಗಕ್ಕೆ ಅಥವಾ ನರಕಕ್ಕೆ ಅವನ ದಾರಿಯನ್ನು ಕಂಡುಕೊಳ್ಳುವನು."