ಕುರ್ ಆನ್‌ನ ಶ್ರೇಷ್ಠತೆಗಳು

ಕುರ್ ಆನ್‌ನ ಶ್ರೇಷ್ಠತೆಗಳು

10- ಓ ಅಬೂ ಮುಂದಿರ್! ನಿಮ್ಮ ಕೈಯಲ್ಲಿರುವ ಅಲ್ಲಾಹನ ಗ್ರಂಥದಲ್ಲಿ ಅತಿ ಶ್ರೇಷ್ಠವಾದ ವಚನ ಯಾವುದೆಂದು ನಿಮಗೆ ತಿಳಿದಿದೆಯೇ?" ನಾನು ಹೇಳಿದೆ: "ಅಲ್ಲಾಹು ಲಾ ಇಲಾಹ ಇಲ್ಲಾ ಹುವಲ್ ಹಯ್ಯುಲ್ ಕಯ್ಯೂಮ್ (ಆಯತುಲ್ ಕುರ್ಸಿ) [ಬಕರ: 255]". ಆಗ ಅವರು ನನ್ನ ಎದೆಗೆ ತಟ್ಟುತ್ತಾ ಹೇಳಿದರು: "ಅಲ್ಲಾಹನಾಣೆ! ಓ ಅಬೂ ಮುಂದಿರ್, ಜ್ಞಾನವು ನಿಮಗೆ ಸಂತೋಷವನ್ನು ದಯಪಾಲಿಸಲಿ

11- ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ರಾತ್ರಿಗಳಲ್ಲೂ ಮಲಗಲು ಹೊರಡುವಾಗ ತಮ್ಮ ಎರಡು ಅಂಗೈಗಳನ್ನು ಜೋಡಿಸುತ್ತಿದ್ದರು. ನಂತರ ಅದಕ್ಕೆ ಮೂರು ಬಾರಿ ಉಗಿದು "ಕುಲ್ ಹುವಲ್ಲಾಹು ಅಹದ್", "ಕುಲ್ ಅಊದು ಬಿರಬ್ಬಿಲ್ ಫಲಕ್" ಮತ್ತು "ಕುಲ್ ಅಊದು ಬಿರಬ್ಬಿ ನ್ನಾಸ್" ಪಠಿಸುತ್ತಿದ್ದರು