Shariah-approved Manners

Shariah-approved Manners

14- ನಿಮ್ಮಲ್ಲಿ ಯಾರಾದರೂ ಅವರು ಇಷ್ಟಪಡುವ ಕನಸನ್ನು ಕಂಡರೆ, ಅದು ಅಲ್ಲಾಹನಿಂದಾಗಿದೆ. ಆದ್ದರಿಂದ ಅವರು ಅದಕ್ಕಾಗಿ ಅಲ್ಲಾಹನನ್ನು ಸ್ತುತಿಸಲಿ ಮತ್ತು ಅದರ ಬಗ್ಗೆ (ಇತರರಿಗೆ) ಹೇಳಲಿ. ಆದರೆ ಅವರು ಅದಲ್ಲದೆ ಅವರಿಗೆ ಇಷ್ಟವಿಲ್ಲದ ಬೇರೆ ಏನಾದರೂ ಕಂಡರೆ, ಅದು ಕೇವಲ ಶೈತಾನನಿಂದಾಗಿದೆ. ಆದ್ದರಿಂದ ಅವರು ಅದರ ಕೆಡುಕಿನಿಂದ ರಕ್ಷಣೆಯನ್ನು ಬೇಡಲಿ ಮತ್ತು ಅದನ್ನು ಯಾರಿಗೂ ತಿಳಿಸದಿರಲಿ. ಹೀಗೆ ಮಾಡಿದರೆ ಅದು ಅವರಿಗೆ ಹಾನಿ ಮಾಡುವುದಿಲ್ಲ

16- ಒಮ್ಮೆ ಒಬ್ಬ ವ್ಯಕ್ತಿ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಎಡಗೈಯಿಂದ ಆಹಾರ ಸೇವಿಸಿದನು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಬಲಗೈಯಿಂದ ಸೇವಿಸಿರಿ." ಆ ವ್ಯಕ್ತಿ ಉತ್ತರಿಸಿದನು: "ನನಗೆ ಅದು ಸಾಧ್ಯವಿಲ್ಲ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮಗೆ ಅದು ಸಾಧ್ಯವಾಗದಿರಲಿ

34- ಒಬ್ಬ ಮುಸ್ಲಿಮನಿಗೆ ಇನ್ನೊಬ್ಬ ಮುಸ್ಲಿಮನ ಮೇಲೆ ಆರು ಹಕ್ಕುಗಳಿವೆ." ಓ ಅಲ್ಲಾಹನ ಸಂದೇಶವಾಹಕರೇ! ಅವು ಯಾವುವು ಎಂದು ಕೇಳಲಾಯಿತು. ಅವರು ಉತ್ತರಿಸಿದರು: "ನೀನು ಅವನನ್ನು ಭೇಟಿಯಾದರೆ, ಅವನಿಗೆ ಸಲಾಂ ಹೇಳುವುದು; ಅವನು ನಿನ್ನನ್ನು ಆಹ್ವಾನಿಸಿದರೆ, ಅವನ ಆಹ್ವಾನವನ್ನು ಸ್ವೀಕರಿಸುವುದು; ಅವನು ನಿನ್ನಲ್ಲಿ ಸಲಹೆ ಕೇಳಿದರೆ, ಅವನಿಗೆ ಸಲಹೆ ನೀಡುವುದು; ಅವನು ಸೀನಿದ ನಂತರ ಅಲ್ಲಾಹನನ್ನು ಸ್ತುತಿಸಿದರೆ, ಅವನಿಗೆ ತಸ್ಮೀತ್ ಮಾಡುವುದು; ಅವನು ಅನಾರೋಗ್ಯಕ್ಕೆ ಒಳಗಾದಾಗ, ಅವನನ್ನು ಸಂದರ್ಶಿಸುವುದು; ಮತ್ತು ಅವನು ನಿಧನನಾದರೆ ಅವನ ಮೃತದೇಹವನ್ನು ಹಿಂಬಾಲಿಸುವುದು