Names and Rulings

Names and Rulings

8- "ಶಕುನ ನೋಡುವವನು, ಶಕುನ ನೋಡಿಸುವವನು, ಭವಿಷ್ಯ ನೋಡುವವನು (ಜ್ಯೋತಿಷಿ), ಭವಿಷ್ಯ ನೋಡಿಸುವವನು, ಮಾಟಮಾಡುವವನು, ಮಾಟ ಮಾಡಿಸುವವನು, ಗಂಟು ಕಟ್ಟುವವನು ಮುಂತಾದವರು ನಮ್ಮಲ್ಲಿ ಸೇರಿದವರಲ್ಲ*. ಯಾರು ಜ್ಯೋತಿಷಿಯ ಬಳಿಗೆ ಹೋಗಿ ಅವನು ಹೇಳಿದ ಮಾತಿನಲ್ಲಿ ನಂಬಿಕೆಯಿಡುತ್ತಾನೋ ಅವನು ಮುಹಮ್ಮದರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವತೀರ್ಣವಾದ ಸಂದೇಶವನ್ನು ನಿಷೇಧಿಸಿದ್ದಾನೆ."

16- ಒಬ್ಬ ವ್ಯಕ್ತಿ ಅಲ್ಲಾಹನ ಸಂದೇಶವಾಹಕರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "@ನಾನು ಐದು ವೇಳೆಯ ಕಡ್ಡಾಯ ನಮಾಝ್‌ಗಳನ್ನು ನಿರ್ವಹಿಸಿದರೆ, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸಿದರೆ, ಧರ್ಮಸಮ್ಮತವಾಗಿರುವುದನ್ನು ಧರ್ಮಸಮ್ಮತವೆಂದು ಮತ್ತು ಧರ್ಮನಿಷಿದ್ಧವಾಗಿರುವುದನ್ನು ಧರ್ಮನಿಷಿದ್ಧವೆಂದು ಪರಿಗಣಿಸಿದರೆ*, ಮತ್ತು ಇವುಗಳಿಗಿಂತ ಹೆಚ್ಚು ಏನೂ ನಿರ್ವಹಿಸದಿದ್ದರೆ, ನಾನು ಸ್ವರ್ಗಕ್ಕೆ ಹೋಗುವೆನೇ?" ಅವರು ಉತ್ತರಿಸಿದರು: "ಹೌದು." ಆ ವ್ಯಕ್ತಿ ಹೇಳಿದರು: "ಅಲ್ಲಾಹನಾಣೆ! ನಾನು ಅವುಗಳಿಗಿಂತ ಏನೂ ಹೆಚ್ಚಿಸುವುದಿಲ್ಲ."

23- "ಅಕಬದಂದು (ದುಲ್-ಹಿಜ್ಜ ಹತ್ತನೇ ದಿನ) ಬೆಳಿಗ್ಗೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಒಂಟೆಯ ಮೇಲಿದ್ದುಕೊಂಡೇ ಹೇಳಿದರು: "ನನಗೆ ಕೆಲವು ಸಣ್ಣ ಕಲ್ಲುಗಳನ್ನು ಹೆಕ್ಕಿಕೊಡಿ." ನಾನು ಅವರಿಗೆ ಕೆಲವು ಸಣ್ಣ ಕಲ್ಲುಗಳನ್ನು ಹೆಕ್ಕಿದೆ. ಅವು ಸಣ್ಣ ಗಾತ್ರದ ಕಲ್ಲುಗಳಾಗಿದ್ದವು. ಅವರು ಅದನ್ನು ಅಂಗೈಯಲ್ಲಿ ಅಲುಗಾಡಿಸುತ್ತಾ ಹೇಳಿದರು: "ಇದರಂತಿರುವುದನ್ನು ಎಸೆಯಿರಿ." ನಂತರ ಹೇಳಿದರು: @"ಓ ಜನರೇ! ಧರ್ಮದಲ್ಲಿ ಮಿತಿಮೀರುವುದರ ಬಗ್ಗೆ ಹುಷಾರಾಗಿರಿ! ಏಕೆಂದರೆ ನಿಮಗಿಂತ ಮೊದಲಿನವರನ್ನು ನಾಶ ಮಾಡಿದ್ದು ಧರ್ಮದಲ್ಲಿರುವ ಅತಿರೇಕವಾಗಿದೆ."

27- ಒಮ್ಮೆ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ನಜ್ದ್ ಕಡೆಯಿಂದ, ಕೆದರಿದ ಕೂದಲಿನ ಒಬ್ಬ ವ್ಯಕ್ತಿ ಬಂದನು. ನಮಗೆ ಅವನ ದೊಡ್ಡ ಸ್ವರ ಕೇಳಿಸುತ್ತಿತ್ತು, ಆದರೆ ಅವನು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮೀಪಕ್ಕೆ ಬರುವ ತನಕ ಅವನು ಏನು ಹೇಳುತ್ತಿದ್ದಾನೆಂದು ನಮಗೆ ಅರ್ಥವಾಗುತ್ತಿರಲಿಲ್ಲ. ನಂತರ ಅವನು ಇಸ್ಲಾಂ ಧರ್ಮದ ಬಗ್ಗೆ ಕೇಳುತ್ತಿದ್ದಾನೆಂದು ತಿಳಿಯಿತು. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಂದು ದಿನ-ರಾತ್ರಿಯಲ್ಲಿ ಐದು ವೇಳೆ ನಮಾಝ್ ನಿರ್ವಹಿಸುವುದು." ಆ ವ್ಯಕ್ತಿ ಕೇಳಿದನು: "ನಾನು ಇದಲ್ಲದೆ ಬೇರೇನಾದರೂ ನಿರ್ವಹಿಸಬೇಕೇ?" ಅವರು ಉತ್ತರಿಸಿದರು: "ಬೇಡ, ಆದರೆ ನೀನು ಸ್ವಯಂಪ್ರೇರಿತವಾಗಿ ನಿರ್ವಹಿಸುವ ಕರ್ಮಗಳ ಹೊರತು. ಮತ್ತು ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು." ಆ ವ್ಯಕ್ತಿ ಕೇಳಿದನು: "ನಾನು ಇದಲ್ಲದೆ ಬೇರೇನಾದರೂ ನಿರ್ವಹಿಸಬೇಕೇ?" ಅವರು ಉತ್ತರಿಸಿದರು: "ಬೇಡ, ಆದರೆ ನೀನು ಸ್ವಯಂಪ್ರೇರಿತವಾಗಿ ನಿರ್ವಹಿಸುವ ಕರ್ಮಗಳ ಹೊರತು." ನಂತರ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಝಕಾತ್‌ನ ಬಗ್ಗೆ ತಿಳಿಸಿದರು. ಆ ವ್ಯಕ್ತಿ ಕೇಳಿದನು: "ನಾನು ಇದಲ್ಲದೆ ಬೇರೇನಾದರೂ ನಿರ್ವಹಿಸಬೇಕೇ?" ಅವರು ಉತ್ತರಿಸಿದರು: "ಬೇಡ, ಆದರೆ ನೀನು ಸ್ವಯಂಪ್ರೇರಿತವಾಗಿ ನಿರ್ವಹಿಸುವ ಕರ್ಮಗಳ ಹೊರತು." ಆ ವ್ಯಕ್ತಿ ಹಿಂದಿರುಗಿ ಹೋಗುತ್ತಾ ಹೇಳತೊಡಗಿದನು: "ಅಲ್ಲಾಹನ ಮೇಲಾಣೆ! ನಾನು ಇದಕ್ಕಿಂತ ಹೆಚ್ಚಿಗೆ ಏನೂ ಮಾಡುವುದಿಲ್ಲ ಮತ್ತು ಇದರಲ್ಲಿ ಏನೂ ಕಡಿಮೆ ಮಾಡುವುದಿಲ್ಲ." ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: @"ಅವನು ಹೇಳಿದ್ದು ಸತ್ಯವಾಗಿದ್ದರೆ ಅವನು ಯಶಸ್ವಿಯಾದನು."

35- ನಾನು ಹೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ಅಜ್ಞಾನ ಕಾಲದಲ್ಲಿ ಇಬ್ನ್ ಜುದ್‌ಆನ್ ಕುಟುಂಬ ಸಂಬಂಧಗಳನ್ನು ಜೋಡಿಸುತ್ತಿದ್ದರು ಮತ್ತು ಬಡವರಿಗೆ ಅನ್ನದಾನ ಮಾಡುತ್ತಿದ್ದರು. ಅವರಿಗೆ ಅದು ಉಪಕರಿಸುತ್ತದೆಯೇ?" ಅವರು ಹೇಳಿದರು: “ಇಲ್ಲ, ಅವರಿಗೆ ಅದು ಉಪಕರಿಸುವುದಿಲ್ಲ. ಏಕೆಂದರೆ @ಅವರು ಒಂದು ದಿನವೂ, 'ಓ ನನ್ನ ಪರಿಪಾಲಕನೇ! ಪ್ರತಿಫಲ ದಿನದಂದು ನನ್ನ ಪಾಪಗಳನ್ನು ಕ್ಷಮಿಸು' ಎಂದು ಹೇಳಿಲ್ಲ."

40- ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ಅಜ್ಞಾನ ಕಾಲದಲ್ಲಿ ನಾನು ದಾನ ಧರ್ಮ, ಗುಲಾಮ ವಿಮೋಚನೆ, ಕುಟುಂಬ ಸಂಬಂಧ ಜೋಡಿಸುವುದು ಮುಂತಾದ ಸತ್ಕರ್ಮಗಳನ್ನು ಮಾಡುತ್ತಿದ್ದೆ. ಅದಕ್ಕಾಗಿ ನನಗೆ ಏನಾದರೂ ಪ್ರತಿಫಲ ದೊರೆಯುವುದೇ?" ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "@ನೀನು ಹಿಂದೆ ಮಾಡಿದ ಒಳಿತುಗಳೊಂದಿಗೇ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವೆ."

45- ಒಮ್ಮೆ ನಾವು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯಲ್ಲಿ ಕುಳಿತಿರುವಾಗ, ಒಬ್ಬ ವ್ಯಕ್ತಿ ಒಂಟೆಯಲ್ಲಿ ಸವಾರಿ ಮಾಡುತ್ತಾ ಅಲ್ಲಿಗೆ ಬಂದರು. ಅವರು ಒಂಟೆಯನ್ನು ಮಸೀದಿಯೊಳಗೆ ಮಂಡಿಯೂರಿಸಿ ಕಟ್ಟಿಹಾಕಿದರು. ನಂತರ ನಮ್ಮೊಡನೆ ಕೇಳಿದರು: "ನಿಮ್ಮಲ್ಲಿ ಮುಹಮ್ಮದ್ ಯಾರು?" ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮ ನಡುವೆ ಒರಗಿ ಕುಳಿತಿದ್ದರು. ನಾವು ಹೇಳಿದೆವು: "ಒರಗಿ ಕುಳಿತಿರುವ ಈ ಬೆಳ್ಳಗಿನ ವ್ಯಕ್ತಿ." ಆಗ ಆ ವ್ಯಕ್ತಿ, "ಓ ಅಬ್ದುಲ್ ಮುತ್ತಲಿಬರ ಮಗನೇ!" ಎಂದು ಕರೆದರು. ಪ್ರವಾದಿಯವರು, "ನಾನು ನಿನಗೆ ಉತ್ತರ ನೀಡಲು ಇಲ್ಲಿದ್ದೇನೆ" ಎಂದು ಉತ್ತರಿಸಿದರು. ಆಗ ಆ ವ್ಯಕ್ತಿ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾನು ತಮ್ಮಲ್ಲಿ ಕೆಲವು ಕಠಿಣ ಪ್ರಶ್ನೆಗಳನ್ನು ಕೇಳುತ್ತೇನೆ. ತಾವು ನನ್ನ ಮೇಲೆ ಕೋಪ ಮಾಡಿಕೊಳ್ಳಬಾರದು." ಆಗ ಪ್ರವಾದಿಯವರು ಹೇಳಿದರು: "ನಿಮಗೆ ಕೇಳಲಿರುವುದನ್ನು ಕೇಳಿ." ಆ ವ್ಯಕ್ತಿ ಕೇಳಿದರು: "ತಮ್ಮ ಮತ್ತು ತಮ್ಮ ಪೂರ್ವಜರ ಪರಿಪಾಲಕನನ್ನು (ಅಲ್ಲಾಹನನ್ನು) ಮುಂದಿಟ್ಟು ಕೇಳುತ್ತೇನೆ. ತಮ್ಮನ್ನು ಸಂಪೂರ್ಣ ಮನುಕುಲದ ಕಡೆಗೆ ಕಳುಹಿಸಿದ್ದು ಅಲ್ಲಾಹನೋ?" ಅವರು ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಅವರು ಕೇಳಿದರು: "ಅಲ್ಲಾಹನನ್ನು ಮುಂದಿಟ್ಟು ಕೇಳುತ್ತೇನೆ. ದಿನರಾತ್ರಿಯಲ್ಲಿ ನಾವು ಐದು ವೇಳೆಯ ನಮಾಝ್‌ಗಳನ್ನು ನಿರ್ವಹಿಸಬೇಕೆಂದು ತಮಗೆ ಆದೇಶಿಸಿದ್ದು ಅಲ್ಲಾಹನೋ?" ಅವರು ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಅವರು ಕೇಳಿದರು: "ಅಲ್ಲಾಹನನ್ನು ಮುಂದಿಟ್ಟು ಕೇಳುತ್ತೇನೆ. ವರ್ಷದಲ್ಲಿ ಈ ತಿಂಗಳು ನಾವು ಉಪವಾಸ ಆಚರಿಸಬೇಕೆಂದು ತಮಗೆ ಆದೇಶಿಸಿದ್ದು ಅಲ್ಲಾಹನೋ?" ಅವರು ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಅವರು ಕೇಳಿದರು: "ಅಲ್ಲಾಹನನ್ನು ಮುಂದಿಟ್ಟು ಕೇಳುತ್ತೇನೆ. ನಮ್ಮಲ್ಲಿನ ಶ್ರೀಮಂತರಿಂದ ಈ ದಾನವನ್ನು ಪಡೆದು ನಮ್ಮಲ್ಲಿರುವ ಬಡವರಿಗೆ ಹಂಚಬೇಕೆಂದು ತಮಗೆ ಆದೇಶಿಸಿದ್ದು ಅಲ್ಲಾಹನೋ?” ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಆಗ ಆ ವ್ಯಕ್ತಿ ಹೇಳಿದರು: "ತಾವು ತಂದ ಸಂದೇಶದಲ್ಲಿ ನಾನು ವಿಶ್ವಾಸವಿಟ್ಟಿದ್ದೇನೆ. ನಾನು ನನ್ನ ಗೋತ್ರದ ದೂತನಾಗಿ ಇಲ್ಲಿಗೆ ಬಂದಿದ್ದೇನೆ. @ನಾನು ಬನೂ ಸಅದ್ ಗೋತ್ರಕ್ಕೆ ಸೇರಿದ ದಿಮಾಮ್ ಬಿನ್ ಸಅಲಬ."