ಆರಾಧನೆ ಆಧಾರದ ಮೇಲೆ ಫಿಕ್ಹ್ (ಆರಾಧನೆಗೆ ಸಂಬಂಧಿಸಿದ ಷರಿಯಾ ವಿಷಯಗಳು) - الصفحة 2

ಆರಾಧನೆ ಆಧಾರದ ಮೇಲೆ ಫಿಕ್ಹ್ (ಆರಾಧನೆಗೆ ಸಂಬಂಧಿಸಿದ ಷರಿಯಾ ವಿಷಯಗಳು) - الصفحة 2

10- ಯಾರು ಅಝಾನ್ ಕೇಳಿದಾಗ, 'ಓ ಅಲ್ಲಾಹ್, ಈ ಪರಿಪೂರ್ಣ ಕರೆಯ ಮತ್ತು ಸಂಸ್ಥಾಪಿಸಲಾದ ನಮಾಝ್‌ನ ಪರಿಪಾಲಕನೇ, ಮುಹಮ್ಮದ್‌ರಿಗೆ ವಸೀಲ (ಸ್ವರ್ಗದಲ್ಲಿ ಒಂದು ಉನ್ನತ ಸ್ಥಾನ) ಮತ್ತು ಫಝೀಲ (ಘನತೆ) ವನ್ನು ನೀಡು. ನೀನು ಅವರಿಗೆ ಭರವಸೆ ನೀಡಿದ ಸ್ತುತ್ಯರ್ಹ ಸ್ಥಾನಕ್ಕೆ (ಮಕಾಮೆ ಮಹ್ಮೂದ್) ಅವರನ್ನು ಕಳುಹಿಸು' ಎಂದು ಪ್ರಾರ್ಥಿಸುತ್ತಾರೋ, ಅವರಿಗೆ ಪುನರುತ್ಥಾನ ದಿನದಂದು ನನ್ನ ಶಿಫಾರಸ್ಸು (ಶಫಾಅತ್) ಖಚಿತವಾಗಿ ದೊರೆಯುತ್ತದೆ

15- ಯಾರು ಎಲ್ಲಾ ನಮಾಝ್‌ಗಳ ನಂತರ ಮೂವತ್ತಮೂರು ಬಾರಿ ಸುಬ್‌ಹಾನಲ್ಲಾಹ್, ಮೂವತ್ತಮೂರು ಬಾರಿ ಅಲ್-ಹಮ್ದುಲಿಲ್ಲಾಹ್ ಮತ್ತು ಮೂವತ್ತಮೂರು ಬಾರಿ ಅಲ್ಲಾಹು ಅಕ್ಬರ್ ಹೇಳುತ್ತಾರೋ—ಇವು ಒಟ್ಟು ತೊಂಬತ್ತೊಂಬತ್ತು— ಮತ್ತು ನೂರನ್ನು ಪೂರ್ತಿ ಮಾಡಲು, ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು, ವಹುವ ಅಲಾ ಕುಲ್ಲಿ ಶೈಇನ್ ಕದೀರ್ ಎಂದು ಪಠಿಸುತ್ತಾರೋ, ಅವರ ಪಾಪಗಳೆಲ್ಲವನ್ನೂ ಕ್ಷಮಿಸಲಾಗುವುದು. ಅವು ಸಮುದ್ರದ ನೊರೆಗಳಷ್ಟಿದ್ದರೂ ಸಹ

69- ಅವರು ತಮ್ಮ ಚಿಕ್ಕ ಮಗುವನ್ನು (ಗಂಡು ಮಗುವನ್ನು) ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಕರೆತಂದರು. ಆ ಮಗು ಇನ್ನೂ (ಘನ) ಆಹಾರವನ್ನು ತಿನ್ನುತ್ತಿರಲಿಲ್ಲ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನನ್ನು (ಮಗುವನ್ನು) ತಮ್ಮ ಮಡಿಲಲ್ಲಿ ಕುಳ್ಳಿರಿಸಿಕೊಂಡರು. ಆಗ ಅವನು ಅವರ ವಸ್ತ್ರದ ಮೇಲೆ ಮೂತ್ರ ವಿಸರ್ಜಿಸಿದನು. ಅವರು ನೀರನ್ನು ತರಿಸಿ, ಅದನ್ನು (ಮೂತ್ರದ ಮೇಲೆ) ಚಿಮುಕಿಸಿದರು. ಅವರು ಅದನ್ನು ತೊಳೆಯಲಿಲ್ಲ