The Creed - الصفحة 2

The Creed - الصفحة 2

15- ಶೈತಾನನು ನಿಮ್ಮಲ್ಲೊಬ್ಬನ ಬಳಿಗೆ ಬಂದು ಕೇಳುತ್ತಾನೆ: "ಇದನ್ನು ಸೃಷ್ಟಿಸಿದ್ದು ಯಾರು? ಇದನ್ನು ಸೃಷ್ಟಿಸಿದ್ದು ಯಾರು?" ಹೀಗೆ ಅವನು "ನಿನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಸೃಷ್ಟಿಸಿದ್ದು ಯಾರು?" ಎಂದು ಕೇಳುವ ತನಕ ಮುಂದುವರಿಯುತ್ತಾನೆ. ಯಾರಿಗಾದರೂ ಇಂತಹ ಅನುಭವವಾದರೆ ಅವನು ಅಲ್ಲಾಹನಲ್ಲಿ ಅಭಯ ಯಾಚಿಸಿ ಅಲ್ಲಿಯೇ ನಿಂತುಬಿಡಲಿ

23- ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಮರ್ಯಮರ ಪುತ್ರ (ಈಸಾ) ಶೀಘ್ರದಲ್ಲೇ ನಿಮ್ಮ ನಡುವೆ ನ್ಯಾಯಯುತ ಆಡಳಿತಗಾರನಾಗಿ ಇಳಿದು ಬರುವರು. ಅವರು ಶಿಲುಬೆಯನ್ನು ಒಡೆಯುವರು, ಹಂದಿಯನ್ನು ಕೊಲ್ಲುವರು ಮತ್ತು ಜಿಝ್ಯವನ್ನು (ಮುಸ್ಲಿಮೇತರರ ಮೇಲಿನ ತೆರಿಗೆ) ರದ್ದುಗೊಳಿಸುವರು. ಆಗ ಸಂಪತ್ತು ಎಷ್ಟರ ಮಟ್ಟಿಗೆ ಹೇರಳವಾಗುತ್ತದೆಯೆಂದರೆ ಅದನ್ನು ಸ್ವೀಕರಿಸಲು ಯಾರೂ ಮುಂದೆ ಬರುವುದಿಲ್ಲ

32- ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ)—ಅವರು ಸತ್ಯವಂತರು ಮತ್ತು ಸತ್ಯವಂತರೆಂದು ಅಂಗೀಕರಿಸಲ್ಪಟ್ಟವರು—ತಿಳಿಸಿದರು: ನಿಶ್ಚಯವಾಗಿಯೂ, ನಿಮ್ಮಲ್ಲಿ ಪ್ರತಿಯೊಬ್ಬನ ಸೃಷ್ಟಿಯನ್ನು ಅವನ ತಾಯಿಯ ಉದರದಲ್ಲಿ ನಲ್ವತ್ತು ದಿನ-ರಾತ್ರಿಗಳ ಕಾಲ 'ನುತ್ಫ'ದ (ವೀರ್ಯದ) ರೂಪದಲ್ಲಿ ಜೋಡಿಸಿಡಲಾಗುತ್ತದೆ

53- ಒಬ್ಬ ಮುಸ್ಲಿಮನಿಗೆ ಇನ್ನೊಬ್ಬ ಮುಸ್ಲಿಮನ ಮೇಲೆ ಆರು ಹಕ್ಕುಗಳಿವೆ." ಓ ಅಲ್ಲಾಹನ ಸಂದೇಶವಾಹಕರೇ! ಅವು ಯಾವುವು ಎಂದು ಕೇಳಲಾಯಿತು. ಅವರು ಉತ್ತರಿಸಿದರು: "ನೀನು ಅವನನ್ನು ಭೇಟಿಯಾದರೆ, ಅವನಿಗೆ ಸಲಾಂ ಹೇಳುವುದು; ಅವನು ನಿನ್ನನ್ನು ಆಹ್ವಾನಿಸಿದರೆ, ಅವನ ಆಹ್ವಾನವನ್ನು ಸ್ವೀಕರಿಸುವುದು; ಅವನು ನಿನ್ನಲ್ಲಿ ಸಲಹೆ ಕೇಳಿದರೆ, ಅವನಿಗೆ ಸಲಹೆ ನೀಡುವುದು; ಅವನು ಸೀನಿದ ನಂತರ ಅಲ್ಲಾಹನನ್ನು ಸ್ತುತಿಸಿದರೆ, ಅವನಿಗೆ ತಸ್ಮೀತ್ ಮಾಡುವುದು; ಅವನು ಅನಾರೋಗ್ಯಕ್ಕೆ ಒಳಗಾದಾಗ, ಅವನನ್ನು ಸಂದರ್ಶಿಸುವುದು; ಮತ್ತು ಅವನು ನಿಧನನಾದರೆ ಅವನ ಮೃತದೇಹವನ್ನು ಹಿಂಬಾಲಿಸುವುದು