Jurisprudence and Juristic Principles

Jurisprudence and Juristic Principles

79- ನಾನು ಅತ್ಯಧಿಕ ಮದಿ (ಸ್ಖಲನಪೂರ್ವ ದ್ರವ) ಸ್ರವಿಸುವ ವ್ಯಕ್ತಿಯಾಗಿದ್ದೆ. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಗಳಿಗಿರುವ ಸ್ಥಾನಮಾನದಿಂದ ನಾನು ಅವರಲ್ಲಿ ಅದರ ಬಗ್ಗೆ ಕೇಳಲು ಸಂಕೋಚಪಡುತ್ತಿದ್ದೆ. ಆದ್ದರಿಂದ, ನಾನು ಮಿಕ್ದಾದ್ ಬಿನ್ ಅಸ್ವದ್ ರಿಗೆ ಆಜ್ಞಾಪಿಸಿದೆ. ಅವರು (ಅದರ ಬಗ್ಗೆ) ಕೇಳಿದಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಉತ್ತರಿಸಿದರು: ಅವರು ತಮ್ಮ ಜನನಾಂಗವನ್ನು ತೊಳೆದು ವುದೂ (ಅಂಗಸ್ನಾನ) ನಿರ್ವಹಿಸಲಿ

101- ಮುಅಝ್ಝಿನ್ (ಅಝಾನ್ ಕರೆ ನೀಡುವವನು) ಕರೆ ನೀಡುವುದನ್ನು ಕೇಳಿದಾಗ, ಯಾರು "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಮತ್ತು ಮುಹಮ್ಮದ್ ಅವನ ದಾಸರು ಮತ್ತು ಸಂದೇಶವಾಹಕರು ಎಂದು ನಾನು ಸಾಕ್ಷ್ಯ ವಹಿಸುತ್ತೇನೆ, ಪರಿಪಾಲಕನಾಗಿ ಅಲ್ಲಾಹನಲ್ಲಿ, ಸಂದೇಶವಾಹಕರಾಗಿ ಮುಹಮ್ಮದ್‌ರಲ್ಲಿ ಮತ್ತು ಧರ್ಮವಾಗಿ ಇಸ್ಲಾಂನಲ್ಲಿ ನನಗೆ ತೃಪ್ತಿಯಿದೆ ಎಂದು ಹೇಳುತ್ತಾನೋ, ಅವನಿಗೆ ಅವನ ಪಾಪಗಳನ್ನು ಕ್ಷಮಿಸಲಾಗುತ್ತದೆ

107- ಯಾರು ಎಲ್ಲಾ ನಮಾಝ್‌ಗಳ ನಂತರ ಮೂವತ್ತಮೂರು ಬಾರಿ ಸುಬ್‌ಹಾನಲ್ಲಾಹ್, ಮೂವತ್ತಮೂರು ಬಾರಿ ಅಲ್-ಹಮ್ದುಲಿಲ್ಲಾಹ್ ಮತ್ತು ಮೂವತ್ತಮೂರು ಬಾರಿ ಅಲ್ಲಾಹು ಅಕ್ಬರ್ ಹೇಳುತ್ತಾರೋ—ಇವು ಒಟ್ಟು ತೊಂಬತ್ತೊಂಬತ್ತು— ಮತ್ತು ನೂರನ್ನು ಪೂರ್ತಿ ಮಾಡಲು, ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು, ವಹುವ ಅಲಾ ಕುಲ್ಲಿ ಶೈಇನ್ ಕದೀರ್ ಎಂದು ಪಠಿಸುತ್ತಾರೋ, ಅವರ ಪಾಪಗಳೆಲ್ಲವನ್ನೂ ಕ್ಷಮಿಸಲಾಗುವುದು. ಅವು ಸಮುದ್ರದ ನೊರೆಗಳಷ್ಟಿದ್ದರೂ ಸಹ